ಒಬ್ಬರಿಗೆ ಎರಡು ಬಾರಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ !
ತಾಂತ್ರಿಕ ದೋಷದಿಂದ ಪ್ರಮಾದ: ಇಲಾಖೆ ಸ್ಪಷ್ಟನೆ

ಮಂಗಳೂರು, ಅ.31: ಓರ್ವ ವ್ಯಕ್ತಿಗೆ ಎರಡು ಬಾರಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸುವ ಮೂಲಕ ಇಲಾಖೆ ಎಡವಟ್ಟು ಮಾಡಿಕೊಂಡಿದೆ.
2020-21ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಶನಿವಾರ ಪ್ರಕಟಿಸಲಾಗಿದ್ದು, 50 ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಇದರಲ್ಲಿ ಪದವಿನಂಗಡಿಯ ಜಾನಪದ ಕಲಾವಿದ ಪಂಬದ ಸಮುದಾಯದ ಭಾಸ್ಕರ ಬಂಗೇರ ಹೆಸರು ಕೂಡಾ ಇತ್ತು. ಆದರೆ ಇವರಿಗೆ 2008ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿತ್ತು. ಆದರೆ ಈ ಬಾರಿಯೂ ಅವರು ಪ್ರಶಸ್ತಿಗೆ ಆಯ್ಕೆಯಾಗಿರುವುದು ಚರ್ಚೆಗೆ ಕಾರಣವಾಗಿತ್ತು.
ಈ ನಡುವೆ ತಾಂತ್ರಿಕ ದೋಷದಿಂದಾಗಿ ಭಾಸ್ಕರ ಬಂಗೇರರ ಹೆಸರು ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಸೇರಿದೆ. ಇದು ಗಮನಕ್ಕೆ ಬರುತ್ತಲೇ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
Next Story





