ವಿಶ್ವಕಪ್:ನ್ಯೂಝಿಲ್ಯಾಂಡ್ಗೆ ಶರಣಾದ ಭಾರತ
ಕೊಹ್ಲಿ ಬಳಗಕ್ಕೆ ಸತತ ಎರಡನೇ ಸೋಲು

photo: ICC
ದುಬೈ, ಅ.31: ಟ್ವೆಂಟಿ-20 ವಿಶ್ವಕಪ್ನ ಸೂಪರ್-12ರ ಸುತ್ತಿನಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ 8 ವಿಕೆಟ್ಗಳ ಅಂತರದಿಂದ ಸೋಲುಂಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋತಿದ್ದ ಕೊಹ್ಲಿ ಬಳಗ ಇದೀಗ ಸತತ ಎರಡನೇ ಸೋಲು ಕಂಡಿದೆ.
ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು 7 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ಗೆಲ್ಲಲು ಸುಲಭ ಸವಾಲು ಪಡೆದ ನ್ಯೂಝಿಲ್ಯಾಂಡ್ 14.3 ಓವರ್ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.
ಆರಂಭಿಕ ಬ್ಯಾಟ್ಸ್ಮನ್ ಡರಿಲ್ ಮಿಚೆಲ್(49, 35 ಎಸೆತ, 4 ಬೌಂ,3 ಸಿ. ), ನಾಯಕ ಕೇನ್ ವಿಲಿಯಮ್ಸನ್(ಔಟಾಗದೆ 33, 31 ಎಸೆತ, 3 ಬೌಂ.) ಹಾಗೂ ಮಾರ್ಟಿನ್ ಗಪ್ಟಿಲ್(20,17 ಎಸೆತ, 3 ಬೌಂ.) ಗೆಲುವಿಗೆ ನೆರವಾದರು. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ(2-19) ಎರಡು ವಿಕೆಟ್ಗಳನ್ನು ಪಡೆದರು.
Next Story