ಮಂಗಳೂರು : ತಲೆಮರೆಸಿಕೊಂಡ ಆರೋಪಿ ಸೆರೆ

ಮಂಗಳೂರು, ಅ.31: ಕ್ರಿಮಿನಲ್ ಪ್ರಕರಣ ಒಂದರಲ್ಲಿ ಭಾಗಿಯಾಗಿ ತಲೆಮೆರೆಸಿಕೊಂಡ ಆರೋಪಿಯೋರ್ವನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೋಟೆಬಾಗಿಲು ನಿವಾಸಿ ಪ್ರವೀಣ್ ಕುಮಾರ್(46) ಎಂದು ಗುರುತಿಸಲಾಗಿದೆ.
ಭೂಗತ ಪಾತಕಿಗಳೊಂದಿಗೆ ನಂಟು ಹಾಗೂ ಮಾರಕಾಸ್ತ್ರಗಳನ್ನು ಹೊಂದಿರುವ ಬಗ್ಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಆರೋಪಿಯನ್ನು ಕರೆ ತರಲು ಮೂಡಬಿದಿರೆ ಪೊಲೀಸರು ಆತನ ಮನೆಗೆ ಹೋಗಿದ್ದು, ಈ ಸಂದರ್ಭ ಮನೆಯಲ್ಲಿದ್ದ ಆರೋಪಿ ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ ಪೊಲೀಸರ ಕತ್ಯರ್ವಕ್ಕೆ ಅಡ್ಡಿಪಡಿಸಿದ್ದು, ಈ ಸಂದರ್ಭ ಆತನನ್ನು ಬೆನ್ನಟ್ಟಿದ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ಪೊಲೀಸರ ಕತ್ಯರ್ವಕ್ಕೆ ಅಡ್ಡಿಪಡಿಸಿ ಆರೋಪದಲ್ಲಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
Next Story





