ಜನರ ಆದಾಯ ಹೆಚ್ಚುತ್ತಿರುವಾಗ, ಬೆಲೆಯೇರಿಕೆಯನ್ನೂ ಅವರು ಒಪ್ಪಿಕೊಳ್ಳಬೇಕು: ಬಿಜೆಪಿ ನಾಯಕನಿಂದ ಪುಕ್ಕಟೆ ಸಲಹೆ

ಭೋಪಾಲ್: ಜನರು ವಾಸ್ತವಕ್ಕೆ ಒಗ್ಗಿಕೊಳ್ಳಬೇಕು ಹಾಗೂ ತಮ್ಮ ಆದಾಯ ಹೆಚ್ಚುತ್ತಿರುವ ಹಾಗೆಯೇ ಸ್ವಲ್ಪ ಹಣದುಬ್ಬರವನ್ನೂ ಒಪ್ಪಿಕೊಳ್ಳಬೇಕು ಎಂಬ ಸಲಹೆ ಬಿಜೆಪಿ ನಾಯಕ ಹಾಗೂ ಮಧ್ಯಪ್ರದೇಶ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರಿಂದ ಬಂದಿದೆ.
"ಸರಕಾರ ಎಲ್ಲವನ್ನೂ ಉಚಿತವಾಗಿ ನೀಡಲು ಸಾಧ್ಯವಿಲ್ಲ. ಜನಸಾಮಾನ್ಯರ ಆದಾಯ ಹೆಚ್ಚಾಗಿಲ್ಲವೇ? ತಮ್ಮ ಆದಾಯ ಹೆಚ್ಚುತ್ತಿದ್ದರೆ ಸ್ವಲ್ಪ ಹಣದುಬ್ಬರವನ್ನೂ ಜನರು ಒಪ್ಪಿಕೊಳ್ಳಬೇಕು" ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
"ತಮ್ಮ ವೇತನ ಹೆಚ್ಚಾದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹತ್ತು ವರ್ಷಗಳ ಹಿಂದೆ ಇದ್ದಷ್ಟೇ ಇರಬೇಕೆಂದು ಜನರು ಹೇಳುವುದು ಸರಿಯಲ್ಲ, ಇದು ಸಾಧ್ಯವೇ ಇಲ್ಲ, ಬೆಲೆಗಳು ಕೇವಲ ನರೇಂದ್ರ ಮೋದಿ ಸರಕಾರದ ಆಡಳಿತಾವಧಿಯಲ್ಲಿ ಹೆಚ್ಚಾಗಿವೆಯೇ? ಇದೊಂದು ನಿರಂತರ ಪ್ರಕ್ರಿಯೆಯೆಂದು ನಾವು ಒಪ್ಪಿಕೊಳ್ಳಬೇಕು" ಎಂದು ಅವರು ಹೇಳಿದರು.
Next Story