Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಶಿಖರದಿಂದ ಸಾಗರ ಅಭಿಯಾನ; ಸಾಹಸಿ...

ಶಿಖರದಿಂದ ಸಾಗರ ಅಭಿಯಾನ; ಸಾಹಸಿ ಯುವತಿಯರಿಗೆ ಉಳ್ಳಾಲ ಸಮುದ್ರ ತೀರದಲ್ಲಿ ಅದ್ದೂರಿ ಸ್ವಾಗತ

ವಾರ್ತಾಭಾರತಿವಾರ್ತಾಭಾರತಿ1 Nov 2021 5:57 PM IST
share
ಶಿಖರದಿಂದ ಸಾಗರ ಅಭಿಯಾನ; ಸಾಹಸಿ ಯುವತಿಯರಿಗೆ ಉಳ್ಳಾಲ ಸಮುದ್ರ ತೀರದಲ್ಲಿ ಅದ್ದೂರಿ ಸ್ವಾಗತ

ಮಂಗಳೂರು : ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕೈಗೊಳ್ಳಲಾಗಿದ್ದ ಐತಿಹಾಸಿಕ ಯಾನ ಶಿಖರದಿಂದ ಸಾಗರ ಅಭಿಯಾನದಲ್ಲಿ ಭಾಗವಹಿಸಿದ್ದ ರಾಜ್ಯದ ಐವರು ಯುವತಿಯರಿಗೆ ಉಳ್ಳಾಲದ ಕಡಲ ತೀರದಲ್ಲಿ ಸೋಮವಾರ ಅದ್ದೂರಿ ಸ್ವಾಗತ ಕೋರಲಾಯಿತು.

ಈ ಯುವತಿಯರು ಕಾಶ್ಮೀರದಲ್ಲಿನ ಕೊಲ್ಹೋಯಿ (5425 ಮೀ) ಶಿಖರವನ್ನು ಏರಿ ತದನಂತರ ಜಗತ್ತಿನ ಅತಿ ಎತ್ತರದ ರಸ್ತೆಯಾದ ಲಡಾಖ್ ನ ಕರ್ ದೂಂಗ್ಲ ಪಾಸ್  ಮೂಲಕ 3350 ಕಿ.ಮೀ, ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಅಲ್ಲಿಂದ ರಾಜ್ಯದ ಕರಾವಳಿ ಸಮುದ್ರದಲ್ಲಿ 300 ಕಿ.ಮೀ. ಕಯಾಕಿಂಗ್ ಯಾನ ಮಾಡಿ ಮಂಗಳೂರಿನ ಉಳ್ಳಾಲದ ಕಡಲ ತೀರವನ್ನು ತಲುಪಿದರು.

ಅವರ ಈ ಯಾತ್ರೆಗೆ 2021ರ ಆಗಸ್ಟ್‌ 16 ರಂದು ಕ್ರೀಡಾ ಸಚಿವರು ಚಾಲನೆ ನೀಡಿದ್ದರು. ಈ ಯಾತ್ರೆಯು ಸುಮಾರು 70 ದಿನಗಳ ಸಾಹಸ ಯಾತ್ರೆಯಾಗಿದ್ದು, ಸ್ತ್ರೀ ಶಕ್ತಿ ಸಾಹಸ, ಧೈರ್ಯ, ಸಮಾನತೆ, ಶ್ರೀ ಸಬಲೀಕರಣ ತತ್ವವನ್ನು ಬಿಂಬಿಸುವ ವಿಭಿನ್ನವಾದ ಕಾರ್ಯಕ್ರಮವಾಗಿದೆ.

ಭಾರತೀಯ ಪರ್ವತಾರೋಹಣ ಸಂಸ್ಥೆಯ ದಕ್ಷಿಣ ವಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿಯ ಸಹಯೋಗದೊಂದಿಗೆ ಈ ಸಾಹಸ ಯಾತ್ರೆಯನ್ನು ನಡೆಸಲಾಗಿತ್ತು. ಕಾರವಾರದಿಂದ ಕಯಾಕ್ ಮೂಲಕ ಹೊರಟ ಈ 5 ಜನ ಯುವತಿಯರ ತಂಡವು ಇಂದು ಉಳ್ಳಾಲ ಕಡಲ ತೀರಕ್ಕೆ ಬಂದು ಸಾಹಸ ಯಾತ್ರೆಯನ್ನು ಪೂರ್ಣಗೊಳಿಸಿತು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯು.ಟಿ. ಖಾದರ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ, ಜನರಲ್ ತಿಮ್ಮಯ್ಯ ಸಾಹಸ ಅಕಾಡಮಿಯ ಸಲಹೆಗಾರ ಕೀರ್ತಿ ಪಯಾಸ್, ಉಳ್ಳಾಲ ನಗಸಭೆ ಅಧ್ಯಕ್ಷ ಚಿತ್ರಕಲಾ, ಉಪಾಧ್ಯಕ್ಷ ಅಯೂಬ್ ಉಳ್ಳಾಲ್, ಸದಸ್ಯರಾದ ಭಾರತಿ, ಸುರೇಶ್ ಭಟ್ ನಗರ, ನಗರಸಭೆ ಪೌರಾಯುಕ್ತ ರಾಯಪ್ಪ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಜನ ಪ್ರತಿನಿಧಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಐವರು ಸಾಹಸ ಯುವತಿಯರ ಕಿರು ಪರಿಚಯ

ಐಶ್ವರ್ಯ ವಿ

ಇವರು ಶಿವಮೊಗ್ಗ ಜಿಲ್ಲೆಯವರಾಗಿದ್ದು, 2017 ರಲ್ಲಿ ಓರಿಯೆಂಟೇಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ ಗಳಲ್ಲಿ ತೇರ್ಗಡೆ ಹೊಂದಿರುತ್ತಾರೆ. 2020 ರಲ್ಲಿ ಭದ್ರಾ ನದಿಯಲ್ಲಿ ನಡೆದ ಮಿಷನ್ ಸುಭದ್ರ ಎಕ್ಸ್ ಪಿಡಿಷನ್ ನಲ್ಲಿ 135 ಕಿ.ಮೀ. ವೈಟ್ ವಾಟರ್ ಕಯಾಕಿಂಗ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. 2020 ಮತ್ತು 2021 ರಲ್ಲಿ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಗಳಿಸಿರುತ್ತಾರೆ.

ಧನಲಕ್ಷ್ಮಿ

ಇವರು ಬೆಂಗಳೂರು ನಗರ ಜಿಲ್ಲೆಯವರಾಗಿದ್ದು, 2019 ರಲ್ಲಿ ಓರಿಯೆಂಟೇಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ ಗಳಲ್ಲಿ ತೇರ್ಗಡೆ ಹೊಂದಿರುತ್ತಾರೆ. 2020 ರಲ್ಲಿ ಭದ್ರಾ ನದಿಯಲ್ಲಿ ನಡೆದ ಮಿಷನ್ ಸುಭದ್ರ ಎಕ್ಸ್ ಪಿಡಿಷನ್ ನಲ್ಲಿ 135 ಕಿ.ಮೀ. ವೈಟ್ ವಾಟರ್ ಕಯಾಕಿಂಗ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. 2020 ಮತ್ತು 2021 ರಲ್ಲಿ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಗಳಿಸಿರುತ್ತಾರೆ.

ಬಿಂದು

ಇವರು ಮೈಸೂರು ಜಿಲ್ಲೆಯವರಾಗಿದ್ದು, 2017 ಓರಿಯೆಂಟೇಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ ಗಳಲ್ಲಿ ತೇರ್ಗಡೆ ಹೊಂದಿರುತ್ತಾರೆ. 2020 ರಲ್ಲಿ ಮೊಟ್ಟ ಮೊದಲ ಬಾರಿಗೆ ಮಧುಗಿರಿಯಲ್ಲಿ ನಡೆದ ಮಹಿಳೆಯರ ಶಿಲಾರೋಹಣ ಅಭಿಯಾನದಲ್ಲಿ 350 ಮೀಟರ್ ನ “ನಿರ್ಭಯ” 6 ಸಿ ಗ್ರೇಡ್ ಮಾರ್ಗ ತೆರೆದ ತಂಡದ ಅಭ್ಯರ್ಥಿಯಾಗಿದ್ದ ಹೆಗ್ಗಳಿಕೆ. 2020 ರಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ರಾಕ್ ಸ್ಟೈಂಬಿಂಗ್ ತರಬೇತಿಯನ್ನು ಪೂರ್ಣಗೊಳಿಸಿರುತ್ತಾರೆ. 2021 ರಲ್ಲಿ ನಡೆದ ಕೋಲಾರ ಬೌಲ್ಡರಿಂಗ್ ಚಾಂಪಿಯನ್ ಶಿಪ್ ನಲ್ಲಿ ಪದಕ ಗಳಿಸಿರುತ್ತಾರೆ.

ಆಶಾ

ಇವರು ಬೆಂಗಳೂರು ನಗರ ಜಿಲ್ಲೆಯವರಾಗಿದ್ದು, 2019 ರಲ್ಲಿ ಓರಿಯೆಂಟೇಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ ಗಳಲ್ಲಿ ತೇರ್ಗಡೆ ಹೊಂದಿರುತ್ತಾರೆ. 2020 ರಲ್ಲಿ ಭದ್ರಾ ನದಿಯಲ್ಲಿ ನಡೆದ ಮಿಷನ್ ಸುಭದ್ರ ಎಕ್ಸ್ ಪಿಡಿಷನ್ ನಲ್ಲಿ 135 ಕಿ.ಮೀ. ವೈಟ್ ವಾಟರ್ ಕಯಾಕಿಂಗ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. 2020 ಮತ್ತು 2021 ರಲ್ಲಿ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಗಳಿಸಿರುತ್ತಾರೆ.

ಪುಪ್ಪ

ಇವರು ಕೊಡಗು ಜಿಲ್ಲೆಯವರಾಗಿದ್ದು, 2017 ರಲ್ಲಿ ಓರಿಯೆಂಟೇಷನ್ ಹಾಗೂ ಬೇಸಿಕ್ ಪರ್ವತಾರೋಹಣ ಕೋರ್ಸ್ ಗಳಲ್ಲಿ ತೇರ್ಗಡೆ ಹೊಂದಿರುತ್ತಾರೆ. 2020 ರಲ್ಲಿ ಬೇಸಿಕ್ ಮತ್ತು ಅಡ್ವಾನ್ಸ್ ರಾಕ್ ಕ್ರೈಂಬಿಂಗ್ ತರಬೇತಿಯನ್ನು ಪೂರ್ಣಗೊಳಿಸಿರುತ್ತಾರೆ. ಹಲವು ಸಾಹಸ ಸ್ಪರ್ಧೆಗಳಲ್ಲಿ ಪದಕಗಳನ್ನು ಗಳಿಸಿರುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X