ಹಳವಳ್ಳಿ- ಕೋಡಿ ಸೀ ವಾಕ್‌ವರೆಗೆ ಸ್ವಚ್ಛ ಕಡಲ ತೀರ, ಹಸಿರು ಕೋಡಿ ಅಭಿಯಾನ

ಕುಂದಾಪುರ, ನ.1: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಕುಂದಾಪುರ ಪುರಸಭೆ ಮತ್ತು ಕೋಡಿ ಮಹಾಜನರ ಸಹಯೋಗದೊಂದಿಗೆ ಸ್ವಚ್ಛ ಕಡಲ ತೀರ, ಹಸಿರು ಕೋಡಿ ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿರುವ ಅಭಿಯಾನದ ಮುಂದುವರಿಕೆಯಾಗಿ ಅ.31ರಂದು ಹಳವಳ್ಳಿಯಿಂದ ಕೋಡಿ ಸೀ ವಾಕ್‌ವರೆಗಿನ 4 ಕಿಲೋ ಮೀಟರ್ ದೂರದ ಕಡಲ ತೀರ ಹಾಗೂ ತೀರದ ಪಕ್ಕದಲ್ಲಿರುವ ರಸ್ತೆಯನ್ನು ಸ್ವಚ್ಛಗೊಳಿಸಲಾಯಿತು.
ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯ್ಯದ್ ಮೊಹಮ್ಮದ್ ಬ್ಯಾರಿ ಮಾತನಾಡಿ, ಇದೊಂದು ಉತ್ಸವವೂ ಅಲ್ಲ, ಸಂಭ್ರಮಾಚಾರಣೆಯೂ ಅಲ್ಲ. ಬದಲಾಗಿ ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುವ ಪರಂಪರೆ ಸ್ವಚ್ಛತೆಯ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಮತ್ತು ಗಟ್ಟಿಗೊಳಿಸಿಕೊಳ್ಳುವ ಪರಂಪರೆ. ಕುಂದಾಪುರದ ಹೆಮ್ಮೆಯ ಕೋಡಿಯನ್ನು ಹಸಿರು ಕೋಡಿಯನ್ನಾಗಿಸುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಇದು ದೇವರ ಕೆಲಸ ಎಂದು ತಿಳಿಸಿದರು.
ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹ್ಮಾನ್, ವಿಶ್ವಸ್ಥ ಅಬೂಬಕ್ಕರ್ ಸಿದ್ದಿಕ್ ಬ್ಯಾರಿ, ನಿರ್ದೇಶಕ ದೋಮ ಚಂದ್ರಶೇಖರ್, ಬ್ಯಾರೀಸ್ ಕಾಲೇಜ್ ಆಫ್ ಎಜುಕೇಶನ್‌ನ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್., ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶಮೀರ್, ಬ್ಯಾರೀಸ್ ಫೌಂಡೇಶನ್ ಫಾರ್ ಟೀಚರ್ಸ್ ಟ್ರೈನಿಂಗ್ ಸಂಸ್ಥೆಯ ಪ್ರಾಂಶುಪಾಲೆ ಡಾ. ಫಿರ್ದೋಸ್, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಅಶ್ವಿನಿ ಶೆಟ್ಟಿ, ಹಾಜಿ ಕೆ.ಮೊಹಿದಿನ್ ಬ್ಯಾರಿ, ಸ್ಮಾರಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ, ಹಾಜಿ ಕೆ.ಮೊಯ್ದಿನ್ ಬ್ಯಾರಿ ಸ್ಮಾರಕ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ದುರ್ಗಿ ಪಟೇಗಾರ್, ಸ್ಥಳೀಯ ಮುನಿಸಿಪಲ್ ಕೌನ್ಸಿಲರ್ ಅಶ್ಫಾಕ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶಂಕರ್ ಪೂಜಾರಿ, ಅಬ್ದುಲ್ಲಾ, ಗೋಪಾಲ್ ಪೂಜಾರಿ, ರಾಮಕೃಷ್ಣ ಪೂಜಾರಿ, ಪೇರಂಟ್ ಅಸೋಸಿಯೇಶನ್ ಮುಖ್ಯ ಸಲಹೆಗಾರರಾದ ಅಬು ಶೇಖ್, ಉಪಾಧ್ಯಕ್ಷ ಮುಸ್ತರಿನ್ ಹಾಗೂ ಪ್ರಕಾಶ್, ಕೋಶಾಧಿಕಾರಿ ರಫೀಕ್, ಕೆ.ಎಂ.ಮುಸ್ತಾಫ, ಶಹಬಾನ್ ಎ.ಎಚ್., ಬಿ.ಎಸ್.ಎಫ್.ಮೊಹಮ್ಮದ್ ರಫೀಕ್, ಭಾಷಾ ಹಂಗಳೂರು, ರವೂಫ್ ಕೋಟೆ, ರಿಯಾಝ್ ಬಾರ್ಕೂರ್, ರಿಯಾಝ್ ಚಾಯ್ಸ್ ಸಿಪ್, ಡಾ.ಆಸಿಫ್, ಸೈಫುಲ್ಲಾ, ಝಮೀರ್ ಮೊದಲಾದವರು ಉಪಸ್ಥಿತರಿದ್ದರು.








