ಆಮೆಯ ಮೇಲೇರಿದ ಆವೆ ಮಣ್ಣಿನ ಹಣತೆ ರಚನೆ

ಉಡುಪಿ, ನ.1: ಈ ಬಾರಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ನಮ್ ಟೀಮ್ ಮಣಿಪಾಲ ಸಂಯೋಜನೆ ಯಲ್ಲಿ ಪರ್ಕಳದ ಗಣಪತಿ ರಚನಾ ಕಲಾವಿದ ದೇವರಾಜ್ ನಾಯಕ್ ಸಣ್ಣಕ್ಕಿಬೆಟ್ಟು ಬೃಹತ್ ಆಮೆಯ ಮೇಲೆ ದೀಪ(ಕೂರ್ಮ ದೀಪ)ವನ್ನು ರಚಿಸಿದ್ದಾರೆ.
ಸುಮಾರು 60 ಕೆಜಿ ಭಾರ ಹೊಂದಿರುವ ಈ ದೀಪಕ್ಕೆ ಸುಮಾರು 20 ಹಂಚುಗಳಿಗೆ ಬಳಸಲಾಗುವಷ್ಟು ಆವೆ ಮಣ್ಣಿನ ಅಚ್ಚುಗಳನ್ನು ಬಳಸಲಾಗಿದೆ. ದೀಪ ಉರಿಸುವಾಗ ಇದರಲ್ಲಿ ಸುಮಾರು ಏಕಕಾಲಕ್ಕೆ ಹ್ತು ಲೀಟರ್ ಎಣ್ಣೆ ಬಳಸಬಹುದಾಗಿದೆ.
ಪರ್ಕಳದ ಶೆಟ್ಟಿಬೆಟ್ಟು ನಡುಮನೆಯ ಅಮಿತಾ ಆರ್.ಹೆಗ್ಡೆ ಮಾಲಕತ್ವದ ರಾಧಾ ಸಂಜೀವ ನಿವಾಸದಲ್ಲಿ ನ.3ರಂದು ಸಂಜೆ 6 ಗಂಟೆಗೆ ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಚಿತ್ರ ಅಕ್ಷಿ ಸಹ ನಿರ್ದೇಶಕ ಮೀನ ರಘು ಈ ಬೃಹತ್ ಆವೆ ಮಣ್ಣಿನ ಹಣತೆಯನ್ನು ಬೆಳಗಿಸಲಿದ್ದಾರೆ ಎಂದು ನಮ್ ಟೀಮ್ ಮಣಿಪಾಲದ ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೇಬೆಟ್ಟು ಬೆಟ್ಟು ತಿಳಿಸಿದ್ದಾರೆ.
Next Story





