ಪ್ರತ್ಯೇಕ ಪ್ರಕರಣ: ಮರದಿಂದ ಬಿದ್ದು ಇಬ್ಬರು ಮೃತ್ಯು
ಅಜೆಕಾರು, ನ.1: ಕುಕ್ಕುಜೆ ಗ್ರಾಮದ ಪಡುಬೈಂತ್ಲ ಎಂಬಲ್ಲಿ ಅ.29ರಂದು ಸಂಜೆ ಏಣಿ ಏರಿ ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಅಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸ್ಥಳೀಯ ನಿವಾಸಿ ಮೈಕಲ್ ಥೋಮಸ್ (66) ಎಂಬವರು ಅ.31ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಪಳ್ಳಿ ಮಹಾಕಾಳಿ ಮಠ ಎಂಬಲ್ಲಿ ಅ.31ರಂದು ಮನೆಯ ತೆಂಗಿನ ಮರದಲ್ಲಿ ಕಾಯಿ ಕೀಳುತ್ತಿದ್ದಾಗ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದ ಸ್ಥಳೀಯರಾದ ನಿತ್ಯಾನಂದ ಪ್ರಭು (41) ಎಂಬವರು ನ.1ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





