ನಮ್ಮ ನಾಡ ಒಕ್ಕೂಟ ಕುಂದಾಪುರ ವತಿಯಿಂದ ಆಯುಷ್ಮಾನ್ ಕಾರ್ಡ್, ವಿದ್ಯಾರ್ಥಿ ವೇತನ ಶಿಬಿರ

ಕುಂದಾಪುರ: ನಮ್ಮ ನಾಡ ಒಕ್ಕೂಟ ಕುಂದಾಪುರ ತಾಲೂಕು ಘಟಕ ಮತ್ತು ಅಲ್ ಮಹರೂಫ್ ಮುಸ್ಲಿಮೀನ್ ಕಮಿಟಿ ಮಾವಿನಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ಮತ್ತು ವಿದ್ಯಾರ್ಥಿ ವೇತನ ಶಿಬಿರ ಸೋಮವಾರ ನಡೆಯಿತು.
ನಮ್ಮ ನಾಡ ಒಕ್ಕೂಟ ಕುಂದಾಪುರ ತಾಲೂಕು ಘಟಕ ಮತ್ತು ಅಲ್ ಮಹರೂಫ್ ಮುಸ್ಲಿಮೀನ್ ಕಮಿಟಿ ಮಾವಿನಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಅಲ್ ಸಬರ್ ಜುಮ್ಮಾ ಮಸೀದಿ ಮಾವಿನಕಟ್ಟೆಯ ಅಧ್ಯಕ್ಷ ಇಸ್ಮಾಯಿಲ್ ಸಾಹೇಬ್ ಅಧ್ಯಕ್ಷತೆಯಲ್ಲಿ ಮಸೀದಿ ಆವರಣದಲ್ಲಿ ಆಯುಷ್ಮಾನ್ ಕಾರ್ಡ್ ಶಿಬಿರ ಮತ್ತು ವಿದ್ಯಾರ್ಥಿ ವೇತನ ಶಿಬಿರ ನಡೆಯಿತು.
ಹಾಫಿಝ್ ಜಿ. ಮುಹಮ್ಮದ್ ರಿಯಾಝ್ (ಇಮಾಮ್ ಅಲ್ ಸಬರ್ ಜುಮಾ ಮಸೀದಿ ಮಾವಿನಕಟ್ಟೆ)ಕಿರಾಅತ್ ಮೂಲಕ ಸಮಾರಂಭವನ್ನು ಪ್ರಾರಂಭಿಸಲಾಯಿತು. ತಾಲೂಕು ಅಧ್ಯಕ್ಷರಾದ ಎಸ್. ದಸ್ತಗೀರ್ ಸಾಹೇಬ್ ಕಂಡ್ಲೂರು ಆಯುಷ್ಮಾನ್ ಕಾರ್ಡ್ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷರಾದ ಮುಷ್ತಾಕ್ ಅಹ್ಮದ್ ಬೆಳ್ವೆ ನಮ್ಮ ನಾಡ ಒಕ್ಕೂಟದ ಧ್ಯೇಯೊದ್ದೇಶ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಅಬ್ದುಲ್ ಶುಕುರ್ ಬೆಳ್ವೆ (ಜಿಲ್ಲಾ ಸಂಯೋಜಕರು ನಮ್ಮ ನಾಡ ಒಕ್ಕೂಟ ಆಯುಷ್ಮಾನ್ ಕಾರ್ಡ್ ಶಿಬಿರ ಉಡುಪಿ ಜಿಲ್ಲೆ) ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಜಮಾತಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಆಯಿಶಾ ಝುಲ್ಫಾ ಮತ್ತು ಮುಹಮ್ಮದ್ ಉನೈಝ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅನ್ಸಾರ್ ಹೂಸಂಗಡಿ (ಜಿಲ್ಲಾ ಸದಸ್ಯರು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆ) ಎನ್ ನಝೀರ್ ಸಾಹೇಬ್ (ಕಾರ್ಯದರ್ಶಿ ಅಲ್ ಮಹಾರೂಫ್ ಮುಸ್ಲಿಮೀನ್ ಕಮಿಟಿ ಮಾವಿನಕಟ್ಟೆ) ಫಝಲ್ ಎಸ್. ನೇರಳಕಟ್ಟೆ (ಉಪಾಧ್ಯಕ್ಷರು, ಅಲ್ ಮಹಾರೂಫ್ ಮುಸ್ಲಿಮೀನ್ ಕಮಿಟಿ ಮಾವಿನಕಟ್ಟೆ) ಮಸೀದಿ ಆಡಳಿತ ಮಂಡಳಿಯ ಸದಸ್ಯರು, ಶೈಕ್ಷಣಿಕ ಅಭಿಮಾನಿ ಯುವಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.







