ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಮುದ್ರ ಕಿನಾರೆಯಲ್ಲಿ ಲಾಠಿ ಯೋಗ

ಮಂಗಳೂರು, ನ.1: ನಗರದ ಮೇರಿಹಿಲ್‌ನ ಜೋಗರ್ಸ್ ಫ್ರೆಂಡ್ಸ್ ಸದಸ್ಯರಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಲಾಠಿ ಯೋಗ ಸೋಮವಾರ ಬೆಳಗ್ಗೆ ನಡೆಯಿತು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ನಾಗೇಶ್ ಕಲ್ಯಾಣಪುರ, ಶಶಿಕಾಂತ್ ಖೋತ್, ಮಂಜು ಹಾಸನ, ನಿಸರ್ಗ ಮಂಜುನಾಥ್ ಲಾಠಿ ಯೋಗದ ನೇತೃತ್ವ ವಹಿಸಿದ್ದರು. ಸುಮಾರು 40 ಮಂದಿ ಲಾಠಿ ಯೋಗದಲ್ಲಿ ಭಾಗವಹಿಸಿದ್ದರು.
Next Story







