ಮಂಗಳವಾರದಿಂದ ಪೂರ್ಣ ಪ್ರಮಾಣದ ಶಾಲಾ ಆರಂಭ

ಬೆಂಗಳೂರು, ನ.1: ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳು ಮದ್ಯಾಹ್ನದ ಬಿಸಿಯೂಟದೊಂದಿಗೆ ಪೂರ್ಣ ಅವಧಿ ತರಗತಿಗಳು ಇಂದಿನಿಂದ(ನ.2) ಆರಂಭವಾಗುತ್ತಿದ್ದು, ಸರಕಾರವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಸರಕಾರವು ಅ.25ರಿಂದ ಪ್ರಾಥಮಿಕ ಶಾಲಾ ತರಗತಿಗಳನ್ನು ಅರ್ಧದಿನ ಮಾತ್ರ ಆರಂಭಿಸಿದೆ. ಇಂದು ಪೂರ್ಣಾವಧಿ ಶಾಲೆ ಆರಂಭಿಸುವುದರೊಂದಿಗೆ ಅಧಿಕೃತವಾಗಿ ಇಂದಿನಿಂದ ಶಾಲೆಗಳು ಪುನರಾರಂಭವಾಗುತ್ತಿವೆ.
ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಶಾಲೆಗಳನ್ನು ಇಪ್ಪತ್ತು ತಿಂಗಳು ಮುಚ್ಚಲಾಗಿತ್ತು. ಸದ್ಯ ಮಹಾಮಾರಿ ಹತೋಟಿಗೆ ಬಂದಿದ್ದರಿಂದ ಶಾಲೆಗಳನ್ನು ಆರಂಭಿಸಲಾಗಿದೆ. ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲು ಸರಕಾರ ಮುಂದಾಗಿದೆ.
ಇನ್ನು ಕೊವೀಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು, ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು ಸೇರಿದಂತೆ ಅಡುಗೆಯವರು ಮಾಸ್ಕ್ ಧರಿಸಬೇಕಾಗಿರುತ್ತದೆ. ಹಾಗೆಯೇ ಸುರಕ್ಷಿತ ಅಂತರ ಪಾಲಿಸಬೇಕಾಗಿರುತ್ತದೆ. ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ.
Next Story





