ಶತಕ ಸಿಡಿಸಿ ವಿಶಿಷ್ಟ ದಾಖಲೆ ನಿರ್ಮಿಸಿದ ಜೋಸ್ ಬಟ್ಲರ್

photo: AFP
ಶಾರ್ಜಾ, ನ.1: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ ಇಂಗ್ಲೆಂಡ್ ನ ಆರಂಭಿಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ವಿಶಿಷ್ಟ ದಾಖಲೆ ನಿರ್ಮಿಸಿದರು.
ಶ್ರೀಲಂಕಾ ವಿರುದ್ಧ ಕೇವಲ 67 ಎಸೆತಗಳಲ್ಲಿ ತಲಾ 6 ಬೌಂಡರಿ, ಸಿಕ್ಸರ್ ಸಹಾಯದಿಂದ 101 ರನ್ ಗಳಿಸಿದ ಬಟ್ಲರ್ ಎಲ್ಲ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಶತಕ ದಾಖಲಿಸಿದ ಇಂಗ್ಲೆಂಡ್ ನ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು. ಬಟ್ಲರ್ ಈಗಾಗಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ್ದಾರೆ.
ಬಟ್ಲರ್ 2021ನೇ ಸಾಲಿನ ಟಿ-20 ವಿಶ್ವಕಪ್ ನಲ್ಲಿ ಶತಕ ದಾಖಲಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು.
Test century
— England Cricket (@englandcricket) November 1, 2021
ODI century
IT20 century@JosButtler is our first men's player to complete the set! #T20WorldCup | #EnglandCricket pic.twitter.com/ZQpAxuGKTk
Next Story