ಮೂಡಬಿದರೆ:21ನೇ ಕರ್ನಾಟಕ ಬಟಾಲಿಯನ್ ಎನ್‌ಸಿಸಿ ಶಿಬಿರ

ಉಡುಪಿ, ನ.2: ಮಂಗಳೂರು ಎನ್‌ಸಿಸಿ ಗ್ರೂಪಿನ ಆಶ್ರಯದಲ್ಲಿ ಮೂಡಬಿದ್ರಿಯ ಆಳ್ವಾಸ್ ಕಾಲೇಜಿನಲ್ಲಿ ಉಡುಪಿಯ 21ನೇ ಕರ್ನಾಟಕ ಬಟಾಲಿಯನ್‌ಆಯೋಜಿಸುತ್ತಿರುವ ಎನ್‌ಸಿಸಿ ಶಿಬಿರ ನ.4ರವರೆಗೆ ನಡೆಯಲಿದೆ.
ಈ ಶಿಬಿರದಲ್ಲಿ 300 ಕೆಡೆಟ್‌ಗಳು, 23 ಸಿಬ್ಬಂದಿಗಳು, ಆರು ಮಂದಿ ಎನ್‌ಸಿಸಿ ಅಧಿಕಾರಿಗಳು ಹಾಗೂ ಆರು ಮಂದಿ ಕಮಾಂಡಿಂಗ್ ಆಫೀಸರ್‌ಗಳು ಭಾಗವಹಿಸುತ್ತಿದ್ದಾರೆ.
ಈ ಶಿಬಿರದ ಮುಖ್ಯ ಉದ್ದೇಶ 2022ನೇ ಜನವರಿಯಲ್ಲಿ ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿರುವ ಕೆಡೆಟ್‌ಗಳ ಆಯ್ಕೆ ಹಾಗೂ ಮಿಲಿಟರಿ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವುದಾಗಿದೆ.
ಉಡುಪಿ, ದ.ಕ, ಶಿವಮೊಗ್ಗ ಮತ್ತು ಮಡಿಕೇರಿ ಜಿಲ್ಲೆಗಳ ವಿವಿಧ ಕಾಲೇಜುಗಳ ಆಯ್ದ ಎನ್‌ಸಿಸಿ ಕೆಡೆಟ್‌ಗಳು ಈ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಮಿಲಿಟರಿ ಕವಾಯತು, ಫಯರಿಂಗ್, ವೆಪನ್ ಟ್ರೈನಿಂಗ್ ಮುಂತಾದ ವಿಷಯ ಗಳಲ್ಲಿ ವಿಸ್ತೃತ ತರಬೇತಿ ನೀಡಲಾಗುತ್ತಿದೆ ಎಂದು ಶಿಬಿರದ ಕಮಾಂಡಿಂಗ್ ಅಧಿಕಾರಿ ಲೆ.ಕ. ಆರ್.ಕೆ. ಸಿಂಗ್ ತಿಳಿಸಿದ್ದಾರೆ.
ಶಿಬಿರದ ಸಹಾಯಕ ಅಧಿಕಾರಿಯಾಗಿ ಲೆ.ಕ. ಎಂ.ಎಸ್. ರಾವತ್, ಮೇ. ಪ್ರಕಾಶ ರಾವ್, ತರಬೇತಿ ಅಧಿಕಾರಿಯಾಗಿ ಮೇ. ಜಯರಾಜ್ ಹಾಗೂ ಲೆ. ನೂತನ್, ಲೆ. ಲೇಪಾಕ್ಷಿ, ಮತ್ತು ಲೆ. ಅಶ್ವಿನ್ ಕುಮಾರ್ ಶೆಟ್ಟಿ ಭಾಗವಹಿಸುತ್ತಿದ್ದಾರೆ.







