ದುರಹಂಕಾರ ಬಿಡಿ,ಜನರನ್ನು ಲೂಟಿ ಮಾಡುವುದನ್ನು ನಿಲ್ಲಿಸಿ:ಪ್ರಧಾನಿಗೆ ಕಾಂಗ್ರೆಸ್ ಕಿವಿಮಾತು

ಹೊಸದಿಲ್ಲಿ: ಉಪಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರು "ದುರಹಂಕಾರವನ್ನು ಬಿಡಬೇಕು" ಹಾಗೂ ರೈತರು ವಿರೋಧಿಸುತ್ತಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಕಿವಿ ಮಾತು ಹೇಳಿದೆ.
ಕೇಂದ್ರ ಸರಕಾರವು ಹೆಚ್ಚಿನ ಇಂಧನ ಬೆಲೆಗಳ ಮೂಲಕ ಸಾರ್ವಜನಿಕರನ್ನು "ಲೂಟಿ" ಮಾಡುವುದನ್ನು ನಿಲ್ಲಿಸಬೇಕು ಹಾಗೂ "ಜನರ ನೋವಿನ ಬಗ್ಗೆ ತಿರಸ್ಕಾರ ಮನೋಭಾವವು ಹಾನಿಕಾರಕ" ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಸಂವಹನ ವಿಭಾಗದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಎಚ್ಚರಿಸಿದ್ದಾರೆ.
3 ಲೋಕಸಭಾ ಕ್ಷೇತ್ರಗಳ ಪೈಕಿ 2ರಲ್ಲಿ ಬಿಜೆಪಿ ಸೋತಿದೆ. ವಿಧಾನಸಭಾ ಉಪ ಚುನಾವಣೆಗಳಲ್ಲಿ, ಕಾಂಗ್ರೆಸ್ ನೊಂದಿಗಿನ ನೇರ ಸ್ಪರ್ಧೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಳಗಳಲ್ಲಿ ಸೋತಿದೆ. ಹಿಮಾಚಲಪ್ರದೇಶ, ರಾಜಸ್ಥಾನ, ಕರ್ನಾಟಕ ಹಾಗೂ ಮಹಾರಾಷ್ಟ್ರ ಇದಕ್ಕೆ ಸಾಕ್ಷಿಯಾಗಿದೆ. ಮೋದಿ ಜೀ, ದುರಹಂಕಾರವನ್ನು ಬಿಡಿ! ಮೂರು ಕಪ್ಪು ಕೃಷಿ ಕಾನೂನುಗಳನ್ನು ರದ್ದುಗೊಳಿಸಿ! ಪೆಟ್ರೋಲ್-ಡೀಸೆಲ್ ,ಗ್ಯಾಸ್ ಲೂಟಿ ನಿಲ್ಲಿಸಿ! ಜನರ ನೋವಿನ ಬಗ್ಗೆ ತಿರಸ್ಕಾರವು ಹಾನಿಕಾರಕವಾಗಿದೆ”ಎಂದು ಹಿರಿಯ ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.
ಮೂರು ಲೋಕಸಭೆ ಹಾಗೂ 29 ವಿಧಾನಸಭಾ ಸ್ಥಾನಗಳಿಗೆ ಶನಿವಾರ ನಡೆದ ಉಪಚುನಾವಣೆಯಲ್ಲಿ, ಹಿಮಾಚಲ ಪ್ರದೇಶ ಹಾಗೂ ಹರ್ಯಾಣದಲ್ಲಿ ಬಿಜೆಪಿ ಹಿನ್ನಡೆಯನ್ನು ಎದುರಿಸಿದೆ. ಈ ಎರಡೂ ರಾಜ್ಯಗಳಲ್ಲಿ ಪಕ್ಷವು ಅಧಿಕಾರದಲ್ಲಿದೆ.
BJP has lost 2 out of 3 Lok Sabha seats.
— Randeep Singh Surjewala (@rssurjewala) November 2, 2021
In Assemblies, BJP has lost at most places in direct contest with INC. HP, Raj., Karnataka & Maharashtra have witnessed it.
Modi ji,
Shed arrogance!
Repeal 3 Black Laws!
Stop Petrol-Diesel-Gas Loot!
Disdain for people’s pain is harmful.