ನ.5ರಂದು ದರ್ಪಣ ಸಂಸ್ಥೆಯಿಂದ ದೀಪಾವಳಿ ರಂಗಿನ ಸ್ಪರ್ಧೆ
ಉಡುಪಿ, ನ.2: ನಗರದ ಸಿಟಿ ಸೆಂಟರ್ ಮಾಲ್ನ 3ನೇ ಮಹಡಿಯಲ್ಲಿ ನವೆಂಬರ್ 5ರ ಅಪರಾಹ್ನ 2 ಗಂಟೆಗೆ ಚಿತ್ರಕಲೆ ಹಾಗೂ ಗೂಡುದೀಪ ರಚನೆ ಸ್ಪರ್ಧೆ ನಡೆಯಲಿದೆ. ಚಿತ್ರಕಲೆ ಸ್ಪರ್ಧೆಯ ವಿಷಯ ’ದೀಪಾವಳಿ ಸಂಭ್ರಮಾಚರಣೆ’.
ಚಿತ್ರಕಲಾ ಸ್ಪರ್ಧೆಗಳು ಎಲ್ಕೆಜಿಯಿಂದ 2ನೇ ತರಗತಿ, 3ನೇ ತರಗತಿಯಿಂದ 7ನೇ ತರಗತಿ, 8ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಡೆದರೆ ಹಾಗು ಸಾರ್ವಜನಿಕರಿಗೆ ನಡೆಯುವ ಗೂಡುದೀಪ ರಚನೆ ಸ್ಪರ್ಧೆಯಲ್ಲಿ 3 ಜನರ ತಂಡ ಪಾಲ್ಗೊಳ್ಳಬಹುದಾಗಿದೆ.
ಹೆಚ್ಚಿನ ವಿವಗಳಿಗಾಗಿ ದರ್ಪಣ ನೃತ್ಯ ಸಂಸ್ಥೆ, ದೂರವಾಣಿ ಸಂಖ್ಯೆ: 9964017386ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story