'ಈ ದೀಪಾವಳಿಗೆ ನನ್ನ ಕುಟುಂಬದೊಂದಿಗೆ ಪಟಾಕಿ ಸಿಡಿಸುತ್ತೇನೆ': ಸಿಟಿ ರವಿ ಟ್ವೀಟ್
ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೀಗೆ...

ಬೆಂಗಳೂರು: 'ಈ ದೀಪಾವಳಿಗೆ ನನ್ನ ಕುಟುಂಬದೊಂದಿಗೆ ಪಟಾಕಿ ಸಿಡಿಸುತ್ತೇನೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ.
ಸಿ.ಟಿ ರವಿ ಅವರ ಟ್ವೀಟ್ ಗೆ ಹಲವರು ಪ್ರತಿಕ್ರಿಯಿಸಿದ್ದು, ಪಟಾಕಿ ಹಚ್ಚಿ ಬೆಂಕಿ ಹಚ್ಚಬೇಡಿ ಎಂದು ಹೇಳಿದ್ದಾರೆ.
ಅವರದೇ ಪಕ್ಷ ಅಧಿಕಾರದಲ್ಲಿರುವ ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ಪಟಾಕಿ ಬಳಕೆಗೆ ನಿಷೇಧ ಹೇರಿರುವ ಕುರಿತು ಕೆಲವರು ಪ್ರಶ್ನಿಸಿದರೆ, ಕೆಲವರು ಪಟಾಕಿ ಭಾರತೀಯರ ಸಂಸ್ಕೃತಿ ಅಲ್ಲ ಎಂದು ಹೇಳಿದ್ದಾರೆ.
ನೀವು ಜನರಿಗೆ ಚೀನಾ ಸಂಸ್ಕೃತಿಯನ್ನು ಏಕೆ ಕಲಿಸುತ್ತಿದ್ದೀರಿ? ನೀವು ಭಾರತೀಯರಲ್ಲವೇ? ಭಾರತೀಯ ಸಂಸ್ಕೃತಿಯು ದೀಪಗಳನ್ನು ಬೆಳಗಿಸುತ್ತಿದೆ. ದೀಪಾವಳಿ ಎಂದರೆ, "ಬೆಳಕಿನ ಹಬ್ಬ" ಬದಲಾಗಿ ಪಟಾಕಿ ಅಲ್ಲ. ಪಟಾಕಿ ಚೀನಾದ ಸಂಸ್ಕೃತಿ. ಚೀನಾ ಇದೀಗ ಭಾರತದ ಮೇಲೆ ಆಕ್ರಮಣ ಮಾಡುತ್ತಿದೆ ಎಂದು ನೆಟ್ಟಿಗೊರೊಬ್ಬರು ಕಮೆಂಟ್ ಮಾಡಿದ್ದಾರೆ.
'ಸರ್, ನಮ್ಮ ಹಿಂದೂ ಹಬ್ಬಗಳಲ್ಲಿ ಪಟಾಕಿಗಳನ್ನು ನಿಷೇಧಿಸುವಂತೆ ಯಾರೂ ಹೇಳುತ್ತಿಲ್ಲ. ನಿಮಗೆ ಯಾವುದೇ ವಿಶೇಷ ಸಂದರ್ಭದಲ್ಲಿ ಸಂತೋಷದಿಂದ ಪಟಾಕಿ ಸಿಡಿಸಬಹುದು. ಆದರೆ, ಈ ರೀತಿಯ ಸಂದೇಶ ಅನೇಕ ಜನರ ಪಟಾಕಿ ಬಳಕೆ ಕಾರಣವಾಗುತ್ತದೆ. ಅದು ಪರಿಸರದ ಮೇಲೆಯೇ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
I will burst crackers with my Family this #Deepavali . . .
— C T Ravi ಸಿ ಟಿ ರವಿ (@CTRavi_BJP) November 1, 2021
I hope and pray for their lives. Why are you teaching them Chinese culture instead of Indian? Are you not Indian? Indian culture is lighting Diyas. Diwali is a "festival of lights" not fireworks. Fireworks is Chinese culture. China is invading India right now
— बादशाह (@sanghiyo) November 1, 2021
Hi sir. You can burst happily for any special occasion. It doesn't make any difference. But if you promote like this and many people do it together it will have effect on environment. Nobody is telling to ban crackers to go against our hindu festival.
— unknown (@unknownmanushya) November 1, 2021







