ಜಲಾಂತರ್ಗಾಮಿ ಮಾಹಿತಿ ಸೋರಿಕೆ:ನೌಕಾಪಡೆ ಕಮಾಂಡರ್ ಸಹಿತ 6 ಮಂದಿಯ ವಿರುದ್ಧ ಸಿಬಿಐ ಆರೋಪ ಪಟ್ಟಿ

ಹೊಸದಿಲ್ಲಿ: ಭಾರತದ ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ಬಗ್ಗೆ ಗೌಪ್ಯ ಮಾಹಿತಿಯನ್ನು 'ಅನಧಿಕೃತ ವ್ಯಕ್ತಿಗಳಿಗೆ' ರವಾನಿಸಿದ ಆರೋಪದಲ್ಲಿ ಸೇವೆಯಲ್ಲಿರುವ ಕಮಾಂಡರ್ ಹಾಗೂ ಇಬ್ಬರು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳು ಸೇರಿದಂತೆ ಆರು ಜನರ ವಿರುದ್ಧ ಕೇಂದ್ರೀಯ ತನಿಖಾ ದಳವು ಆರೋಪಪಟ್ಟಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಆರು ಜನರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಳು ಭಾರತದ ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ಮೀಡಿಯಂ ರಿಫಿಟ್ ಲೈಫ್ ಪ್ರಮಾಣೀಕರಣ ಅಥವಾ ಎಂಆರ್‌ಎಲ್‌ಸಿ ಕಾರ್ಯಕ್ರಮದ ಗೌಪ್ಯ ವಾಣಿಜ್ಯ ಮಾಹಿತಿಯನ್ನು 'ಅನಧಿಕೃತ ಜನರಿಗೆ' ರವಾನಿಸುತ್ತಿದ್ದರು ಎಂದು ಸಿಬಿಐ ಹೇಳಿದೆ.
ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ರಣದೀಪ್ ಸಿಂಗ್ ಹಾಗೂ ಎಸ್.ಜೆ. ಸಿಂಗ್ ಅವರನ್ನು ಸೆಪ್ಟೆಂಬರ್ 3 ರಂದು ಸಿಬಿಐ ಬಂಧಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಈ ಇಬ್ಬರ ವಿರುದ್ಧ ಮೊದಲ ಆರೋಪಪಟ್ಟಿ ಸಲ್ಲಿಸಲಾಗಿದೆ. ಎರಡನೇ ಚಾರ್ಜ್‌ಶೀಟ್‌ನಲ್ಲಿ ಹೈದರಾಬಾದ್ ಮೂಲದ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಸೇರಿದಂತೆ ಮೂವರು ನಿರ್ದೇಶಕರನ್ನು ಹೆಸರಿಸಲಾಗಿದೆ.