ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆ
ಸಿಡಿಲು ಬಡಿದು ಜಾನುವಾರು ಸಾವು, ಹಲವು ಮನೆಗಳಿಗೆ ಹಾನಿ

ಉಡುಪಿ, ನ.2: ಉಡುಪಿ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಹಾಗೂ ಇಂದು ಮಧ್ಯಾಹ್ನ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ಜಾನುವಾರು ಮೃತಪಟ್ಟು, ಮನೆಗಳಿಗೆ ಹಾನಿಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ- 44.1ಮಿ.ಮೀ., ಬ್ರಹ್ಮಾವರ -33.9ಮಿ.ಮೀ.,, ಕಾಪು -15.9ಮಿ.ಮೀ., ಕುಂದಾಪುರ- 19.0ಮಿ.ಮೀ., ಬೈಂದೂರು-10.8ಮಿ.ಮೀ., ಕಾರ್ಕಳ-24.3ಮಿ.ಮೀ., ಹೆಬ್ರಿ-22.6ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 22.9ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ನ.1ರಂದು ರಾತ್ರಿ ವೇಳೆ ಕುಂದಾಪುರ ತಾಲೂಕಿನ ಇಡೂರು ಕುಂಜ್ಞಾಡಿ ಗ್ರಾಮದ ಪಾರ್ವತಿ ಶೆಡ್ತಿ ಎಂಬವರ ಮನೆಯ ಸಮೀಪ ಸಿಡಿಲು ಬಡಿದ ಪರಿಣಾಮ ಅವರ ಕೊಟ್ಟಿಗೆಯಲ್ಲಿದ್ದ ಒಂದು ಜಾನುವಾರು ಮೃತಪಟ್ಟಿದೆ. ಇದರಿಂದ ಸುಮಾರು 45,000ರೂ. ನಷ್ಟ ಅಂದಾಜಿಸಲಾಗಿದೆ. ಆದರೆ ದನ ಕೊಟ್ಟಿಗೆಗೆ ಯಾವುದೇ ಹಾನಿಯಾಗಿಲ್ಲ. ಸ್ಥಳಕ್ಕೆ ಗ್ರಾಮ ಕರಣಿಕ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅದೇ ರೀತಿ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ವಿಶ್ವನಾಥ್ ಪಾಟ್ಕರ್ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಛಾವಣಿ, ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿ ಸುಮಾರು 50,000ರೂ. ನಷ್ಟ ಉಂಟಾಗಿದೆ. ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮಳೆಯಿಂದಾಗಿ ಬ್ರಹ್ಮಾವರ ತಾಲೂಕಿನ ಹನೆಹಳ್ಳಿ ಗ್ರಾಮದ ಸುಜಾತ ಮರಕಾಲ್ತಿ ಎಂಬವರ ಮನೆ ಸಂಪೂರ್ಣ ಹಾನಿಯಾಗಿದ್ದು, ಸುಮಾರು 2ಲಕ್ಷ ನ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಮಧ್ಯಾಹ್ನ ವೇಳೆ ಜಿಲ್ಲೆಯ ಹಲವೆಡೆ ಅನಿರೀಕ್ಷಿತವಾಗಿ ಮಳೆ ಯಾಗಿದ್ದು, ಇದರಿಂದ ನಗರದ ಬಡಗುಪೇಟೆ ಸೇರಿದಂತೆ ಹಲವು ರಸ್ತೆಗಳಲ್ಲಿಯೇ ನೀರು ಹರಿದು ಪಾದಾಚಾರಿ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಯಿತು. ಅಲ್ಲದೆ ಮಳೆ ಯಿಂದಾಗಿ ದೀಪಾವಳಿ ಖರೀದಿಗಾಗಿ ನಗರಕ್ಕೆ ಆಗಮಿಸಿದ ಜನರು ಪರದಾಡು ವಂತಾಯಿತು. ಅದೇ ರೀತಿ ನಗರದ ಪ್ರಮುಖ ರಸ್ತೆಗಳಲ್ಲಿ ರಾತ್ರಿಯವರೆಗೂ ಟ್ರಾಫಿಕ್ ಜಾ್ ಕಿರಿಕಿರಿ ಅನುಭವಿಸುವಂತಾಯಿತು.







