ಭಟ್ಕಳ ರಾಬಿತಾ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅನಿವಾಸಿ ಭಾರತೀಯರ ಒಕ್ಕೂಟವಾಗಿರುವ ರಾಬಿತಾ ಸೂಸೈಟಿಗೆ ಇತ್ತಿಚೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಮುಂದಿನ 3 ವರ್ಷದ ಅವಧಿಗಾಗಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಮುಸ್ಬಾ ಮುಹಮ್ಮದ್ ಫಾರೂಖ್, ಪ್ರಧಾನ ಕಾರ್ಯದರ್ಶಿಯಾಗಿ ಖ್ಯಾತ ಉದ್ಯಮಿ ಅತಿಕರ‍್ರಹ್ಮಾನ್ ಮುನಿರಿ ಆಯ್ಕೆಗೊಂಡಿದ್ದಾರೆ ಎಂದು ವರದಿಯಾಗಿದೆ.
ಕಾರ್ಯದರ್ಶಿಯಾಗಿ ಮೌಲಾನಾ ಮೌಲಾ ಕರಾಣಿ, ಲೆಕ್ಕಿಗರಾಗಿ ಅಫಾಕ್ ನಾಯ್ತೆ, ಖಜಾಂಚಿಯಾಗಿ ಜೈಲಾನಿ ಮೊಹತೇಶಮ್ ಆಯ್ಕೆಯಾಗಿದ್ದಾರೆ.
ರಾಬಿತಾ ಸಂಸ್ಥೆಯು ಅನಿವಾಸಿ ಭಾರತೀಯರ ಸಂಸ್ಥೆಯಾಗಿದ್ದು ಇದು ಭಟ್ಕಳದಲ್ಲಿ ಹಲವಾರು ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪುರಸ್ಕರಿಸುವುದು, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡುವುದು, ಭಟ್ಕಳದಲ್ಲಿ ಸಾಮರಸ್ಯವನ್ನುಂಟು ಮಾಡುವಲ್ಲಿ ಈ ಸಂಸ್ಥೆಯ ಪಾತ್ರ ಮಹತ್ತರವಾಗಿದೆ ಎಂಬುದು ಸ್ಮರಣೀಯ.
Next Story





