ದ್ವೇಷರಾಜಕಾರಣ ಬಹಳ ದಿನ ನಡೆಯದು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ವಿಧಾನಸಭೆ ಉಪ ಚುನಾವಣೆ ಫಲಿತಾಂಶ

ಚಿಕ್ಕಮಗಳೂರು: ದ್ವೇಷರಾಜಕಾರಣ ಬಹಳ ದಿನ ನಡೆಯದು. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಜನತೆ ಗಮನಿಸಿ, ತೀರ್ಮಾನ ಕೈಗೊಳ್ಳುತ್ತಾರೆ. ಹಾಗಾಗಿ ಆ ಪಕ್ಷದ ಕೆಲವು ಮುಖಂಡರು ಹಗುರವಾಗಿ ಮಾತನಾಡದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಂಗಳವಾರ ನಗರದ ಸಂಸದರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿರುವುದು ಫಲಿತಾಂಶ ಹಿನ್ನಡೆಗೆ ಕಾರಣವೇ ಎಂದಾಗ, ಯಾವುದೇ ಸಂಘಟನೆಯ ಹಿನ್ನಲೆ, ಮುನ್ನಲೆಯನ್ನು ತಿಳಿದುಕೊಂಡು ಮಾತನಾಡಬೇಕು. ಓಟ್ ಬ್ಯಾಂಕ್ ರಾಜಕಾರಣ, ಜಾತಿ,ಧರ್ಮದ ಓಲೈಕೆಗೆ ಆತುರವಾಗಿ ಮಾತನಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ ಆಗಿದೆ ಎಂದು ಇದೇ ವೇಳೆ ಹೇಳಿದರು.
ಬಯಲು ಪ್ರದೇಶದಲ್ಲಿ ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಅನುಕೂಲವಾಗುವಂತೆ ಗೋದಾಮು ಮತ್ತು ಶೀಥಲೀಕರಣ ಘಟಕಗಳನಿರ್ಮಾಣಕ್ಕೆ ಸರ್ವೆಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾರಿಗಳ ಬೆಳೆಗಳ ಸಂರಕ್ಷಣೆಗೆ ಶೀಥಲೀಕರಣ ಘಟಕಗಳ ನಿರ್ಮಾಣ ಅಗತ್ಯವಾಗಿದೆ. ದೇಶದಲ್ಲಿ ಆಹಾರ ಉತ್ಪಾದನೆ ಅಧಿಕಗೊಂಡಿದ್ದು, ಕಳೆದ ವರ್ಷ 326 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ, ಈ ವರ್ಷ 390 ಮಿಲಿಯನ್ ಮೆಟ್ರಿಕ್‍ಟನ್ ತರಕಾರಿ ಉತ್ಪಾದನೆಯಾಗುವ ಸಾಧ್ಯತೆಗಳಿವೆ. ತಾಜಾ ತರಕಾರಿಗಳನ್ನು ಸಂರಕ್ಷಣೆ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಶಿಥಲೀಕರಣ ಘಟಕಗಳ ನಿರ್ಮಾಣ ಅತ್ಯಗತ್ಯ ಎಂದರು.







