ವಿಟ್ಲ; ಮೀಲಾದುನ್ನೆಬಿ ಕಾರ್ಯಕ್ರಮ
ವಿಟ್ಲ: ವಿಟ್ಲ ಸಮೀಪದ ಗಾಂಧಿನಗರ ಮಸ್ಜಿದುಲ್ ಬದ್ರಿಯಾ ಮತ್ತು ಹಿದಾಯತುಲ್ ಇಸ್ಲಾಂ ಮದರಸದ ವತಿಯಿಂದ ಮೀಲಾದುನ್ನೆಬಿ ಕಾರ್ಯಕ್ರಮ ನಡೆಯಿತು. ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಮಹಮ್ಮದ್ ಅಲಿ ಫೈಝಿ ಉದ್ಘಾಟಿಸಿದರು.
ಮದರಸದ ಅಧ್ಯಕ್ಷ ಮುನೀರ್ ಗಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೈಯದ್ ಹುಸೈನ್ ಪಾಷಾ ಸಅದಿ, ಶಫೀಕ್ ಸಖಾಫಿ, ಅಬೂಬಕರ್ ಅನಿಲಕಟ್ಟೆ, ಮನ್ಸೂರ್ ಹಾನೆಸ್ಟ್,ಸಿದ್ದೀಕ್ ಮಾಲಮೂಲೆ,ಇಸ್ಮಾಯಿಲ್ ಶಾಪಿ ಮುಂತಾದವರು ಭಾಗವಹಿಸಿದ್ದರು.
ಕಾರ್ಯದರ್ಶಿ ಸಫ್ವಾನ್ ಎಂ.ಎಸ್ ಮರ್ಝೂಕ್ ಹಾನೆಸ್ಟ್,ಅಬ್ದುಲ್ ಹಮೀದ್ ,ಮಹಮ್ಮದ್ ಇಸ್ಮಾಯಿಲ್ ಗಾಂಧಿ ನಗರ, ಸಾದಿಕ್, ಲತೀಫ್, ಶಾಫಿ ಗಮಿ ಮೊದಲಾದವರು ಉಪಸ್ಥಿತರಿದ್ದರು. ಮುಸ್ತಫಾ ಹನೀಫಿ ನಿರೂಪಿಸಿದರು.
Next Story





