ಅಫ್ಘಾನ್ ಕುರಿತು ಭಾರತ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುವುದಿಲ್ಲ: ಪಾಕ್ ಹೇಳಿಕೆ

ಇಸ್ಲಮಾಬಾದ್, ನ.2: ಭಾರತದ ಆತಿಥೇಯತ್ವದಲ್ಲಿ ನಡೆಯಲಿರುವ ಅಫ್ಘಾನಿಸ್ತಾನದ ಕುರಿತ ಪ್ರಾದೇಶಿಕ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಭಾಗವಹಿುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಉಜ್ಬೇಕಿಸ್ತಾನದೊಂದಿಗೆ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸುದ್ಧಿಗಾರರ ಜತೆ ಮಾತನಾಡಿದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಡಾ. ಮೊಯೀದ್ ಯೂಸುಫ್, ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಬಂದಿದೆ. ಆದರೆ ಇದನ್ನು ತಿರಸ್ಕರಿಸಲು ನಿರ್ಧರಿಸಿದ್ದೇವೆ ಎಂದರು. ಇದಕ್ಕೂ ಮುನ್ನ, ಸಭೆಯಲ್ಲಿ ಪಾಲ್ಗೊಳ್ಳುವಂತೆ ಭಾರತದಿಂದ ಆಹ್ವಾನ ಬಂದಿರುವುದನ್ನು ಪಾಕಿಸ್ತಾನದ ವಿದೇಶ ವ್ಯವಹಾರ ಇಲಾಖೆ ದೃಢಪಡಿಸಿತ್ತು.
ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಭಾರತವು ರಶ್ಯಾ, ಇರಾನ್, ಚೀನಾ, ಪಾಕಿಸ್ತಾನ, ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನಕ್ಕೆ ಅಧಿಕೃತ ಆಮಂತ್ರಣ ರವಾನಿಸಿದೆ. ಇತ್ತೀಚೆಗೆ ಮಾಸ್ಕೋದಲ್ಲಿ ನಡೆದಿದ್ದ ಅಫ್ಘಾನ್ ಕುರಿತು ಸಭೆಯಲ್ಲಿ ಭಾರತ ಪಾಲ್ಗೊಂಡಿತ್ತು.
Next Story





