ಧವನ್ ಸಹಿತ 35 ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ

ಹೊಸದಿಲ್ಲಿ, ನ.2: ಕೇಂದ್ರ ಯುವ ಜನ ವ್ಯವಹಾರ ಕ್ರೀಡಾ ಸಚಿವಾಲಯವು ಇಂದು ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು 35 ಅರ್ಜುನ ಪ್ರಶಸ್ತಿ ಪುರಸ್ಕೃತರಲ್ಲಿ ಪ್ಯಾರಾಲಿಂಪಿಕ್ಸ್ ಪದಕ ವಿಜೇತರು ಹಾಗೂ ಕ್ರಿಕೆಟಿಗರಾದ ಶಿಖರ್ ಧವನ್ ಸೇರಿದ್ದಾರೆ.
ದ್ರೋಣಾಚಾರ್ಯ ಪ್ರಶಸ್ತಿಗೆ ಒಟ್ಟು 10 ಕೋಚ್‌ಗಳನ್ನ್ನು ಆಯ್ಕೆ ಮಾಡಲಾಗಿದೆ.
ಜೀವಮಾನದ ಸಾಧನೆಯ ವಿಭಾಗದಲ್ಲಿ ಟಿ.ಪಿ.ಔಸೆಫ್ (ಅಥ್ಲೆಟಿಕ್ಸ್), ಸರ್ಕಾರ್ ತಲ್ವಾರ್ (ಕ್ರಿಕೆಟ್), ಸರ್ಪಾಲ್ ಸಿಂಗ್ (ಹಾಕಿ), ಅಶನ್ ಕುಮಾರ್ (ಕಬಡ್ಡಿ) ಹಾಗೂ ತಪನ್ ಕುಮಾರ್ ಪಾಣಿಗ್ರಾಹಿ (ಈಜು) ಅವರನ್ನು ಗೌರವಕ್ಕೆ ಆಯ್ಕೆ ಮಾಡಲಾಯಿತು.
ನಿಯಮಿತ ದ್ರೋಣಾಚಾರ್ಯ ವಿಭಾಗದಲ್ಲಿ ರಾಧಾಕೃಷ್ಣನ್ ನಾಯರ್ ಪಿ (ಅಥ್ಲೆಟಿಕ್ಸ್), ಸಂಧ್ಯಾ ಗುರುಂಗ್ (ಬಾಕ್ಸಿಂಗ್), ಪ್ರೀತಮ್ ಸಿವಾಚ್ (ಹಾಕಿ), ಜೈ ಪ್ರಕಾಶ್ ನೌಟಿಯಾಲ್ (ಪ್ಯಾರಾ ಶೂಟಿಂಗ್) ಹಾಗೂ ಸುಬ್ರಮಣಿಯನ್ ರಾಮನ್ (ಟೇಬಲ್ ಟೆನಿಸ್) ಪ್ರಶಸ್ತಿ ಗೆದ್ದಿದ್ದಾರೆ.
ಸಜ್ಜನ್ ಸಿಂಗ್ (ಕುಸ್ತಿ), ಮಾಜಿ ವಿಶ್ವ ಹಾಗೂ ಏಷ್ಯನ್ ಚಾಂಪಿಯನ್ ಬಾಕ್ಸರ್ ಲೇಖಾ ಕೆ.ಸಿ, ಅಭಿಜಿತ್ ಕುಂಟೆ (ಚೆಸ್), ದವೀಂದರ್ ಸಿಂಗ್ ಗಾರ್ಚಾ (ಹಾಕಿ) ಹಾಗೂ ವಿಕಾಸ್ ಕುಮಾರ್ (ಕಬಡ್ಡಿ) ಅವರೊಂದಿಗೆ ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
► ಅರ್ಜುನ ಪ್ರಸ್ತಿ ಪುರಸ್ಕೃತರು
ಅರ್ಪಿಂದರ್ ಸಿಂಗ್ (ಅಥ್ಲೆಟಿಕ್ಸ್), ಸಿಮ್ರಾನ್ ಜಿತ್ ಕೌರ್ (ಬಾಕ್ಸಿಂಗ್), ಶಿಖರ್ ಧವನ್ (ಕ್ರಿಕೆಟ್), ಸಿಎ ಭವಾನಿ ದೇವಿ (ಫೆನ್ಸಿಂಗ್), ಮೋನಿಕಾ (ಹಾಕಿ), ವಂದನಾ ಕಟಾರಿಯಾ (ಹಾಕಿ), ಸಂದೀಪ್ ನರ್ವಾಲ್ (ಕಬಡ್ಡಿ), ಹಿಮಾನಿ ಉತ್ತಮ್ ಪರಬ್ (ಮಲ್ಲಕಂಬ), ಅಭಿಷೇಕ್ ವರ್ಮಾ (ಶೂಟಿಂಗ್), ಅಂಕಿತಾ ರೈನಾ (ಟೆನಿಸ್), ದೀಪಕ್ ಪುನಿಯಾ (ಕುಸ್ತಿ), ದಿಲ್ಪ್ರೀತ್ ಸಿಂಗ್ (ಹಾಕಿ), ಹರ್ಮನ್ ಪ್ರೀತ್ ಸಿಂಗ್ (ಹಾಕಿ), ರೂಪಿಂದರ್ ಪಾಲ್ ಸಿಂಗ್ (ಹಾಕಿ), ಸುರೇಂದರ್ ಕುಮಾರ್ (ಹಾಕಿ), ಅಮಿತ್ ರೋಹಿದಾಸ್ (ಹಾಕಿ), ಬೀರೇಂದ್ರ ಲಾಕ್ರಾ (ಹಾಕಿ), ಸುಮಿತ್ (ಹಾಕಿ), ನೀಲಕಂಠ ಶರ್ಮಾ (ಹಾಕಿ), ಹಾರ್ದಿಕ್ ಸಿಂಗ್ (ಹಾಕಿ), ವಿವೇಕ್ ಸಾಗರ್ ಪ್ರಸಾದ್ (ಹಾಕಿ), ಗುರ್ಜಂತ್ ಸಿಂಗ್ (ಹಾಕಿ), ಮನ್ದೀಪ್ ಸಿಂಗ್ (ಹಾಕಿ), ಶಂಶೇರ್ ಸಿಂಗ್ (ಹಾಕಿ), ಲಲಿತ್ ಕುಮಾರ್ ಉಪಾಧ್ಯಾಯ (ಹಾಕಿ), ವರುಣ್ ಕುಮಾರ್ (ಹಾಕಿ), ಸಿಮ್ರಾನ್ ಜೀತ್ ಸಿಂಗ್ (ಹಾಕಿ), ಯೋಗೇಶ್ ಕಥುನಿಯಾ (ಪ್ಯಾರಾ ಅಥ್ಲೆಟಿಕ್ಸ್) ನಿಶಾದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಪ್ರವೀಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಸುಹಾಸ್ ಯತಿರಾಜ್ (ಪ್ಯಾರಾ ಬ್ಯಾಡ್ಮಿಂಟನ್) ಸಿಂಗ್ರಾಜ್ ಅಧಾನ (ಪ್ಯಾರಾ ಶೂಟಿಂಗ್ ), ಭಾವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನಿಸ್), ಹರ್ವಿಂದರ್ ಸಿಂಗ್ (ಪ್ಯಾರಾ ಆರ್ಚರಿ) ಹಾಗೂ ಶರದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್).