ಐಎಂಎ ಕರಾವಳಿ ಶಾಖೆಯ ಪದಾಧಿಕಾರಿಗಳ ಪದಗ್ರಹಣ

ಉಡುಪಿ, ನ.3: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿ ಘಟಕದ 2021-22 ಸಾಲಿನ ನೂತನ ಅಧ್ಯಕ್ಷ ರಾಗಿ ಡಾ.ವಿನಾಯಕ್ ಶೆಣೈ ಅಧಿಕಾರ ಸ್ವೀಕರಿಸಿದರು.
ಮಣಿಪಾಲದ ಹೋಟೆಲ್ ಮಧುವನ್ ಸೆರಾಯ್ ಸಭಾಂಗಣದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಕೆ.ಜಯರಾಮ್ ಶೆಣೈ ಪದಗ್ರಹಣ ನೆರವೇರಿಸಿದರು.
ಕೊರೋನ ಸಂದರ್ಭದಲ್ಲಿ ವಿಶೇಷ ಸೇವೆ ನೀಡಿದ ಕಳೆದ ಸಾಲಿನ ಅಧ್ಯಕ್ಷ ಉಮೇಶ್ ಪ್ರಭು ಹಾಗೂ ಕಾರ್ಯದರ್ಶಿ ಪ್ರಕಾಶ್ ಭಟ್ ಅವರನ್ನು ಗೌರವಿಸಲಾಯತು. ಉಪಾಧ್ಯಕ್ಷರಾದ ಪಿಪಿ.ವಿ.ಭಂಡಾರಿ, ಖಜಾಂಜಿ ರಂಜಿತಾ ನಾಯಕ್, ನೂತನ ಕಾರ್ಯದರ್ಶಿ ಡಾ.ಗಣಪತಿ ಹೆಗ್ಡೆ ಉಪಸ್ಥಿತರಿದ್ದರು.
ಡಾ.ಉಮೇಶ್ ಪ್ರಭು ಸ್ವಾಗತಿಸಿದರು. ಡಾ.ಶರತಚಂದ್ರ ರಾವ್ ವಂದಿಸಿದರು. ಡಾ. ಅರುಣ್ ವರ್ಣೇಕರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವೈದ್ಯರ ಸಂಘದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.
Next Story





