ವಿಶ್ವಕಪ್:ಅಫ್ಘಾನಿಸ್ತಾನದ ವಿರುದ್ದ ಭಾರತ 210/2
ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಭರ್ಜರಿ ಜೊತೆಯಾಟ

photo: AFP
ಅಬುಧಾಬಿ, ನ.3: ರೋಹಿತ್ ಶರ್ಮಾ(74) ಹಾಗೂ ಕೆ.ಎಲ್.ರಾಹುಲ್(69) ಭರ್ಜರಿ ಜೊತೆಯಾಟದ ನೆರವಿನಿಂದ ಭಾರತ ತಂಡ ಟ್ವೆಂಟಿ-20 ವಿಶ್ವಕಪ್ ಸೂಪರ್-12ರ ಸುತ್ತಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಇನಿಂಗ್ಸ್ ಆರಂಭಿಸಿದ ರೋಹಿತ್(74, 47 ಎಸೆತ,8 ಬೌಂಡರಿ, 3 ಸಿಕ್ಸರ್) ಹಾಗೂ ರಾಹುಲ್(69, 48 ಎಸೆತ, 6 ಬೌಂಡರಿ, 2 ಸಿಕ್ಸರ್) ಮೊದಲ ವಿಕೆಟಿಗೆ 140 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು.
ಈ ಇಬ್ಬರು ಔಟಾದ ಬಳಿಕ ರಿಷಭ್ ಪಂತ್ (ಔಟಾಗದೆ 27) ಹಾಗೂ ಹಾರ್ದಿಕ್ ಪಾಂಡ್ಯ(ಔಟಾಗದೆ 35)ತಂಡದ ಮೊತ್ತವನ್ನು 210ಕ್ಕೆ ತಲುಪಿಸಿದರು.
Next Story