ವೀರಕಂಬ ಒಕ್ಕೂಟದ ಸ್ವಸಹಾಯ ಸಂಘಗಳ ಅಧ್ಯಕ್ಷೆಯಾಗಿ ಶಾಂಭವಿ ಆಚಾರ್ಯ ಆಯ್ಕೆ

ಶಾಂಭವಿ ಆಚಾರ್ಯ
ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವಿಟ್ಲ ಇದರ ಕಲ್ಲಡ್ಕ ವಲಯದ ಸ್ವಸಹಾಯ ಸಂಘಗಳ ವೀರಕಂಬ ಒಕ್ಕೂಟದ ಅಧ್ಯಕ್ಷರಾಗಿ ಶಾಂಭವಿ ಆಚಾರ್ಯ ಆಯ್ಕೆಯಾಗಿದ್ದಾರೆ.
ಕಲ್ಲಡ್ಕ ವಲಯದ ಅಧ್ಯಕ್ಷ ಈಶ್ವರ ನಾಯ್ಕ, ಮೇಲ್ವಿಚಾರಕಿ ಸುಗುನ ಶೆಟ್ಟಿ, ಮತ್ತು ಸೇವಾ ಪ್ರತಿನಿಧಿ ರೇವತಿ ಇವರ ಉಪಸ್ಥಿತಿಯಲ್ಲಿ ವೀರಕಂಬ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ವೀರಕಂಬ ಒಕ್ಕೂಟದ ನೂತನ ಉಪಾಧ್ಯಕ್ಷರಾಗಿ ಹರೀಶ್ ಬಂಗೇರ, ಕಾರ್ಯದರ್ಶಿಯಾಗಿ ಪದ್ಮಾವತಿ, ಜೊತೆ ಕಾರ್ಯದರ್ಶಿ ಯಾಗಿ ಆನಂದ, ಕೋಶಾಧಿಕಾರಿಯಾಗಿ ಪ್ರೇಮ ಆಚಾರ್ಯ , ಉಪಸಮಿತಿ ಸದಸ್ಯರಾಗಿ ಮೀನಾಕ್ಷಿ, ವೇದಾವತಿ , ಸವಿತಾ, ಪ್ರಕಾಶ್, ಯೋಗೀಶ್ ಹಾಗೂ ದಾಖಲಾತಿ ಸಮಿತಿಯ ಸದಸ್ಯರನ್ನಾಗಿ ಶೋಭಾ, ರೇಖಾ, ರಂಜಿತಾ, ಹರಿಣಾಕ್ಷಿ, ಮಮತಾ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ವೀರಕಂಬ ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
Next Story





