ಡಿ.ಕೆ.ಎಸ್.ಸಿ. ಡೆವಲಪ್ಮೆಂಟ್ ಕಮಿಟಿ ವತಿಯಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್, ವಾರ್ಷಿಕ ಸಭೆ

ಮಂಗಳೂರು : ಡಿಕೆಎಸ್.ಸಿ. ಡೆವಲಪ್ಮೆಂಟ್ ಕಮಿಟಿ ಮಂಗಳೂರು ಆಯೋಜಿಸಿದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ವಾರ್ಷಿಕ ಮಹಾ ಸಭೆಯು ಮಂಗಳೂರಿನ ಸಹಕಾರಿ ಸದನದಲ್ಲಿ ಮಂಗಳವಾರ ನಡೆಯಿತು.
ಅಸ್ಸಯ್ಯಿದ್ ಹಬೀಬುಲ್ಲಾ ಪೂಕೋಯ ತಂಙಳ್ (ಅಧ್ಯಕ್ಷರು, ಸುನ್ನೀ ಗೈಡೆನ್ಸ್ ಬ್ಯುರೋ) ನೇತೃತ್ವದಲ್ಲಿ ಮೌಲಿದ್ ಕಾರ್ಯಕ್ರಮ ಜರುಗಿತು. ಹಮೀದ್ ಫೈಝಿ ಕಿಲ್ಲೂರ್, ಮೂಳೂರು ಮರ್ಕರ್ ವ್ಯವಸ್ಥಾಪಕರಾದ ಮುಸ್ತಫಾ ಸಅದಿ, ಸೇರಿದಂತೆ ಹಲವಾರು ಉಲಮಾ-ಉಮರಾ ನೇತಾರರು ಭಾಗವಹಿಸಿದ್ದರು.
ಅಸ್ಸಯ್ಯಿದ್ ಕುಂಬೋಲ್ ಕೆ.ಎಸ್. ಆಟಕೋಯ ತಂಙಳ್ ಸಭೆಗೆ ಹಾಜರಾಗಲು ಅನಾನುಕೂಲವಾದ್ದರಿಂದ ದೂರವಾಣಿಯ ಮೂಲಕ ದುಆಶೀರ್ವಚನ ನೀಡಿದರು. ಡೆವಲಪ್ಮೆಂಟ್ ಸಮಿತಿಯ ಮಹಾಸಭೆಯು ಅಧ್ಯಕ್ಷ ಹುಸೈನ್ ಹಾಜಿ ನೇತೃತ್ವದಲ್ಲಿ ನೆರವೇರಿತು. ಸಭೆಯಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷರು, ಕೋಶಾಧಿಕಾರಿ, ಸಂವಹನ ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ ಹಾಗೂ ಸದಸ್ಯರು, ಡೆವಲಪ್ಮೆಂಟ್ ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಡೆವಲಪ್ಮೆಂಟ್ ಕಮಿಟಿಯ ಲೆಕ್ಕ ಪರಿಶೋಧಕರಾದ ಇಸಾಕ್ ಹಾಜಿ ಬೊಳ್ಳಾಯಿ ಸ್ವಾಗತಿಸಿದರು. ಕೃಷ್ಣಾಪುರ ಘಟಕದ ಸದಸ್ಯರಾದ ಅಹ್ಮದ್ ಸಾದಿಕ್ ಕಾಟಿಪಳ್ಳ ಡಿ.ಕೆ.ಎಸ್.ಸಿ. ಯ ಸ್ವಾಗತ ಹಾಡನ್ನು ಹಾಡಿದರು. ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ತ್ರೈ-ವಾರ್ಷಿಕ ವರದಿಯನ್ನು ಮಂಡಿಸಿದರು. ಜೊತೆ ಕಾರ್ಯದರ್ಶಿ ಯು.ಡಿ. ಇಬ್ರಾಹಿಂ ಲೆಕ್ಕ ಪತ್ರ ಮಂಡಿಸಿದರು. ಲೆಕ್ಕ ಪರಿಶೋಧಕರಾದ ಇಸಾಕ್ ಬೊಳ್ಳಾಯಿ ಲೆಕ್ಕ ಪತ್ರವನ್ನು ಪರಿಶೀಲಿಸಿ ಅನುಮೋದಿಸಿದರು.
ಚುನಾವಣಾಧಿಕಾರಿಯಾಗಿ ಇಸಾಕ್ ಹಾಜಿ ಬೊಳ್ಳಾಯಿ ಕಾರ್ಯನಿರ್ವಹಿಸಿದರು. ನೂತನ ಕಾರ್ಯಕಾರಿ ಸಮಿತಿಗೆ ಗೌರವಾಧ್ಯಕ್ಷರಾಗಿ ಅಸ್ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್, ಕುಂಬೋಲ್ , ಅಧ್ಯಕ್ಷರಾಗಿ ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್, ಕುಂಬೋಲ್, ಕಾರ್ಯಾಧ್ಯಕ್ಷರಾಗಿ ಹುಸೈನ್ ಹಾಜಿ ಕಿನ್ಯ, ಪ್ರ.ಕಾರ್ಯದರ್ಶಿಯಾಗಿ ಸಂಶುದ್ದೀನ್ ಬಳ್ಕುಂಜೆ, ಕೋಶಾಧಿಕಾರಿಯಾಗಿ ಇಸಾಕ್ ಬೊಳ್ಳಾಯಿ ಉಪಾಧ್ಯಕ್ಷರುಗಳು: ಇ.ಕೆ ಇಬ್ರಾಹಿಂ ಹಾಜಿ ಕಿನ್ಯ, ಬಶೀರ್ ಕೈಕಂಬ, ಇಸ್ಮಾಈಲ್ ಶಾಫಿ ವಿಟ್ಲ, ಜೊತೆ ಕಾರ್ಯದರ್ಶಿಗಳು: ಯು.ಡಿ ಇಬ್ರಾಹಿಂ ಉಳ್ಳಾಲ, ಅಹ್ಮದ್ ಶರೀಫ್ ಬಜ್ಪೆ, ಲೆಕ್ಕ ಪರಿಶೋಧಕರು : ಅನ್ವರ್ ಹುಸೈನ್ ಗೂಡಿನಬಳಿ, ಸಂಚಾಲಕರುಗಳು : ಉಮರುಲ್ ಫಾರೂಕ್ ಸುರತ್ಕಲ್, ಮೊಯ್ದಿನ್ ಹಾಜಿ ಕೃಷ್ಣಾಪುರ, ಮನ್ಸೂರ್ ಕೃಷ್ಣಾಪುರ, ಹಮೀದ್ ಕೊಂಚಾರ್, ಮುಖ್ಯ ಸಲಹೆಗಾರರು : ಉಮರ್ ಹಾಜಿ ಮುಕ್ವೆ, ಕನ್ವೀನರ್ : ಬದ್ರುದ್ದೀನ್ ಬಜ್ಪೆ, ಸದಸ್ಯರುಗಳು : ಝೈನುದ್ದೀನ್ ಮುಕ್ವೆ, ಅಲಿ ಅಬ್ಬಾಸ್ ಸೂರಲ್ಪಾಡಿ, ಅಬ್ದುಲ್ಲ ಕುವೆಂಜ, ಎಂ.ಎಂ. ಕುಂಙಿ ಮೊಂಟೆಪದವು, ಅಬ್ಬಾಸ್ ಹಾಜಿ ಎಲಿಮಲೆ, ಎನ್.ಎಸ್ ಅಬ್ದುಲ್ಲ, ಹಮೀದ್ ಸುಳ್ಯ, ಅಬ್ದುಲ್ ರಹ್‌ಮಾನ್ ಪ್ಯಾರಿಸ್, ಯೂಸುಫ್ ಕರಂಬಾರ್, ಸಿದ್ದೀಕ್ ದೇರಳಕಟ್ಟೆ, ಮೋನು ಹಾಜಿ, ಪಂಜಾಲ ಮುಂತಾದವರು ಆಯ್ಕೆಯಾದರು.







