ತೈಲ ಸಾಗಣೆ ಹಡಗು ವಶಪಡಿಸುವ ಅಮೆರಿಕ ನೌಕಾಪಡೆಯ ಯತ್ನ ವಿಫಲ: ಇರಾನ್

ಸಾಂದರ್ಭಿಕ ಚಿತ್ರ:twitter
ಟೆಹರಾನ್,ಅ.3:ಒಮಾನ್ ಸಮುದ ಪ್ರದೇಶದಲ್ಲಿ ತನ್ನ ತೈಲವನ್ನು ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಹಡಗನ್ನು ವಶಪಡಿಸಿಕೊಳ್ಳುವ ಅಮೆರಿಕ ನೌಕಾಪಡೆಯ ಪ್ರಯತ್ನವನ್ನು ತಾನು ವಿಫಲಗೊಳಿಸಿರುವುದಾಗಿ ಇರಾನ್ ಬುಧವಾರ ತಿಳಿಸಿದೆ. ಆದರೆ ಈ ಘಟನೆ ನಡೆದ ದಿನಾಂಕವಾಗಲಿ ಅಥವಾ ಟ್ಯಾಂಕರ್ಹಡಗು ನೋಂದಣಿಯಾದ ದೇಶದ ಹೆಸರನ್ನಾಗಲಿ ಇರಾನ್ ಬಹಿರಂಗಪಡಿಸಿಲ್ಲ. ಜಾಗತಿಕ ಶಕ್ತಿಗಳ ಜೊತೆ ಅಣು ಒಪ್ಪಂದವನ್ನು ಪುನರುಜ್ಜೀವನಗೊಳಿಸುವ ಮೂಲಕ ತನ್ನ ತೈಲ ರಫ್ತುಗಳ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳನ್ನು ರದ್ದುಪಡಿಸಲು ಇರಾನ್ ಪ್ರಯತ್ನಿಸುತ್ತಿರುವ ಮಧ್ಯೆ ಈ ಘಟನೆ ವರದಿಯಾಗಿದೆ.
‘ ಇರಾನ್ನ ತೈಲವನ್ನು ರಫ್ತು ಮಾಡುತ್ತಿರುವ ಟ್ಯಾಂಕರ್ ಹಡಗನ್ನು ಅಮೆರಿಕವು ಓಮಾನ್ ಸಮುದ್ರದಲ್ಲಿ ತಡೆದು ನಿಲ್ಲಿಸಿದ್ದು ಹಾಗೂ ಅದರಲ್ಲಿದ್ದ ಸರಕನ್ನು ಇನ್ನೊಂದು ಟ್ಯಾಂಕರ್ ಹಡಗಿಗೆ ವರ್ಗಾಯಿಸಿದೆ ಮತ್ತು ಆ ಹಡಗನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಿಕೊಟ್ಟಿದೆ ’ ಇರಾನ್ ತಿಳಿಸಿದೆ.
ಇರಾನ್ನ ನೌಕಾಪಡೆಯು ವೈಮಾನಿಕ ಬೆಂಬಲದೊಂದಿಗೆ ಆ ಟ್ಯಾಂಕರನ್ನು ವಶಪಡಿಸಿಕೊಂಡಿರುವುದಾಗಿ ಅದುಹೇಳಿದೆ. ಆದರೆ ಅದು ಯಾವ ಹಡಗೆಂಬ ಬಗ್ಗೆ ಇರಾನ್ ಸ್ಪಷ್ಟಪಡಿಸಿಲ್ಲ. ‘‘ ಅಮೆರಿಕ ಪಡೆಗಳು ಸಮರ ನೌಕೆ ಹಾಗೂ ಹಲವಾರು ಹೆಲಿಕಾಪ್ಟರ್ಗಳನ್ನು ಬಳಸಿ ಟ್ಯಾಂಕರ್ನ ಪ್ರಯಾಣವನ್ನು ತಡೆಯಲು ಯತ್ನಿಸಿದವು. ಆದರೆ ಅವು ಮತ್ತೊಮ್ಮೆ ವಿಫಲವಾದವು ಎಂದು ಇರಾನ್ ಹೇಳಿದೆ.
2015ರ ಅಣು ಒಪ್ಪಂದದಡಿ ವಾಶಿಂಗ್ಟನ್ ಇರಾನ್ನ ತೈಲ ರಫ್ತುಗಳನ್ನು ನಿರ್ಬಂಧಗಳನ್ನ ತೆಗೆದುಹಾಕಿತ್ತು ಹಾಗೂ ಅದರ ಬದಲಾಗಿ ಆ ದೇಶದ ಪರಮಾಣು ಚಟುವಟಿಕೆಳಿಗೆ ಕಟ್ಟುನಿಟ್ಟಿನ ಇತಿಮಿತಿಗಳನ್ನು ಹೇರಿತ್ತು.. 2018ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಒಪ್ಪಂದವನ್ನು ರದ್ದುಪಡಿಸಿದ್ದರು ಹಾಗೂ ಮತ್ತೆ ಇರಾನ್ ಮೇಲೆ ವ್ಯಾಪಕ ನಿರ್ಬಂಧಗಳನ್ನು ವಿಧಿಸಿದ್ದರು.







