ವಿಶ್ವಕಪ್:ಅಫ್ಘಾನ್ ವಿರುದ್ದ ಭಾರತಕ್ಕೆ ಭರ್ಜರಿ ಜಯ
ಮಿಂಚಿದ ಮುಹಮ್ಮದ್ ಶಮಿ

photo: ICC
ಅಬುಧಾಬಿ, ನ.3: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನದ ವಿರುದ್ಧ 66 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಸತತ ಎರಡು ಪಂದ್ಯಗಳಲ್ಲಿ ಸೋತಿದ್ದ ಕೊಹ್ಲಿ ಬಳಗ ಕೊನೆಗೂ ಗೆಲುವಿನ ನಗೆ ಬೀರಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು.
ಗೆಲ್ಲಲು ಕಠಿಣ ಗುರಿ ಪಡೆದ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು.
ಅಫ್ಘಾನ್ ಪರ ಕರೀಮ್ ಜನತ್(ಔಟಾಗದೆ 42, 22 ಎಸೆತ)ಗರಿಷ್ಟ ಸ್ಕೋರ್ ಗಳಿಸಿದರು. ನಾಯಕ ಮುಹಮ್ಮದ್ ನಬಿ(35, 32 ಎಸೆತ), ಗುರ್ಬಾಝ್(19), ಗುಲ್ಬದಿನ್ ನಬಿ(18) ಎರಡಂಕೆ ಸ್ಕೋರ್ ಗಳಿಸಿದರು.
ಭಾರತದ ಪರ ಮುಹಮ್ಮದ್ ಶಮಿ (3-32)ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್(2-14) ಹಾಗೂ ರವೀಂದ್ರ ಜಡೇಜ(1-19)ಮೂರು ವಿಕೆಟ್ ಹಂಚಿಕೊಂಡರು.
Next Story





