'ಆತ್ಮಹತ್ಯೆ ನಿರ್ಧಾರ ಕೈಬಿಡಿ': ಅಭಿಮಾನಿಗಲಿಗೆ ನಟ ರಾಘವೇಂದ್ರ ರಾಜ್‍ಕುಮಾರ್ ಮನವಿ

ಬೆಂಗಳೂರು, ನ.4: ಪುನೀತ್ ರಾಜ್‍ಕುಮಾರ್ ನಿಧನ ಹಿನ್ನೆಲೆ ಕೆಲ ಅಭಿಮಾನಿಗಳು ಆತ್ಮಹತ್ಯೆಗೆ ಮುಂದಾಗುತ್ತಿರುವ ನಿರ್ಧಾರ ಸರಿಯಲ್ಲ. ಇದನ್ನು ಕೈಬಿಡಿ ಎಂದು ನಟ ರಾಘವೇಂದ್ರ ರಾಜ್‍ಕುಮಾರ್ ಮನವಿ ಮಾಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳು ಯಾರೂ ಕೂಡ ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಎಲ್ಲ ಆತ್ಮಹತ್ಯೆ ಮಾಡಿಕೊಂಡರೆ ಭೂಮಿ ಮೇಲೆ ಯಾರೂ ಉಳಿಯುವುದಿಲ್ಲ ಎಂದರು.
ಅಲ್ಲದೆ, ನಮ್ಮ ನೋವನ್ನು ನಿಮ್ಮ ತಂದೆ-ತಾಯಿಗೆ ಕೊಡಬೇಡಿ. ಇದರಿಂದ ನಮಗೂ ಒಳ್ಳೆಯದಾಗಲ್ಲ. ಎಲ್ಲರ ಜೀವವೂ ಅಮೌಲ್ಯವಾಗಿದ್ದು, ಆತ್ಮಹತ್ಯೆ ಘಟನೆ ಮತ್ತೆ ಮರುಕಳಿಸಬಾರದು ಎಂದು ಅವರು ಹೇಳಿದರು.
Next Story





