ಕಲಬುರಗಿ: 4ವರ್ಷದ ಮಗಳನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ತಂದೆ

ಕಲಬುರಗಿ: ವ್ಯಕ್ತಿಯೋರ್ವ 4ವರ್ಷದ ಮಗಳನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಫಜಲಪುರ ತಾಲೂಕಿನ ಉಪ್ಪರವಾಡಿಯಲ್ಲಿ ಬುಧವಾರ ನಡೆದಿದೆ.
ಮೃತ ಬಾಲಕಿಯನ್ನು ಪೂನಂ (4) ಎಂದು ಗುರುತಿಸಲಾಗಿದ್ದು, ಅರ್ಜುನ್ ಎಂಬವನೇ ತನ್ನ ಮಗಳು ಪೂನಂಳನ್ನು ಹತ್ಯೆಗೈದು ಆತ್ಮಹತ್ಯೆಮಾಡಿಕೊಂಡಿರುವ ವ್ಯಕ್ತಿ.
ಕೌಟುಂಬಿಕ ಕಲಹದಿಂದಾಗಿ ಬುಧವಾರ ರಾತ್ರಿ ಅರ್ಜುನ್ ಮಗಳು ಪೂನಂಳನ್ನು ಕೊಲೆಗೈದು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ಎಸ್.ಪಿ ಇಶಾ ಪಂತ್ ಅವರು ಪಟ್ಟಣದ ಶವಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಅಫಜಲಪುರ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.
Next Story





