ನ.5 : 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನ ಉದ್ಘಾಟನೆ
ಮಂಗಳೂರು:ಯುನಿವೆಫ್ ಕರ್ನಾಟಕ ಪ್ರತಿವರ್ಷದಂತೆ ಈ ವರ್ಷವೂ ಪ್ರವಾದಿ ಮುಹಮ್ಮದ್(ಸ) ಅವರ ಜನ್ಮ ಮಾಸಾಚರಣೆಯ ನಿಮಿತ್ತ ಶಾಂತಿ ಸಂದೇಶ ಪ್ರಚಾರದ ಸಲುವಾಗಿ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನವನ್ನು "ಮಾನವೀಯ ಮೌಲ್ಯಗಳು, ಪರಧರ್ಮ ಸಹಿಷ್ಣುತೆ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ನವೆಂಬರ್ 5 ರಿಂದ 2022 ರ ಜನವರಿ 7ರ ವರೆಗೆ ಹಮ್ಮಿಕೊಂಡಿದೆ.
60 ದಿನಗಳ ಈ ಅಭಿಯಾನದಲ್ಲಿ ಸಾರ್ವಜನಿಕ ಭಾಷಣ, ಜೀಪ್ ಅನೌನ್ಸ್ ಮೆಂಟ್, ಕರಪತ್ರ, ಪುರವಣಿ, ಪುಸ್ತಕ ವಿತರಣೆ, ಕ್ವಿಝ್ ಮತ್ತು ಪ್ರಬಂಧ ಸ್ಪರ್ಧೆ, ಬುದ್ಧಿಜೀವಿಗಳೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮಗಳ ಮೂಲಕ ಪ್ರವಾದಿ (ಸ) ಯವರ ಮಾನವೀಯ ಸಂದೇಶಗಳನ್ನು ಪ್ರಚಾರ ಮಾಡಲಾಗುತ್ತದೆ.
ಈ ಅಭಿಯಾನದ ಉದ್ಘಾಟನಾ ಸಮಾರಂಭವು ನವೆಂಬರ್ 5 ರ ಶುಕ್ರವಾರ ಸಂಜೆ 6.30ಕ್ಕೆ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ ನಲ್ಲಿ ಜರಗಲಿರುವುದು. ಈ ಕಾರ್ಯಕ್ರಮದಲ್ಲಿ "ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ" ಪ್ರದಾನ ಸಮಾರಂಭವೂ ಜರಗಲಿದೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಭಿಯಾನ ಸಂಚಾಲಕ ವಕಾಝ್ ಅರ್ಶಲನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.





