ಸೋನಾ ಬಝಾರ್ ಹಾಜಿ ಮುಹಮ್ಮದ್ ಕುಂಞಿಗೆ ಸಂತಾಪ ಸಭೆ

ಮಂಗಳೂರು, ನ.5: ನಿನ್ನೆ ನಿಧನರಾದ ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಸಂಸ್ಥೆಯ ಸ್ಥಾಪಕ ಸದಸ್ಯರೂ ಸಾಮಾಜಿಕ ಮುಂದಾಳಾಗಿದ್ದ ಸೋನಾ ಬಝಾರ್ ಮುಹಮ್ಮದ್ ಕುಂಞಿಯವರಿಗೆ ಸಂತಾಪ ಸಭೆ, ದುಆ ಮಜ್ಲಿಸ್ ಹಾಗೂ ಪ್ರಾರ್ಥನಾ ಸಂಗಮ ದಾರುನ್ನೂರ್ ಜುಮಾ ಮಸೀದಿಯಲ್ಲಿ ನಡೆಯಿತು.
ದಾರುನ್ನೂರ್ ಸಮಿತಿಯ ಅಧ್ಯಕ್ಷರೂ ಹಾಗೂ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುರ್ರಝಾಕ್, ಕೋಶಾಧಿಕಾರಿ ಹಾಜಿ ಮುಹಮ್ಮದ್ ಹನೀಫ್ ಸಂತಾಪವನ್ನು ಸೂಚಿಸಿದರು.
ಈ ಸಂದರ್ಭ ದಾರುನ್ನೂರ್ ಸಂಸ್ಥೆಯ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
.jpeg)
Next Story





