ಚಾಮುಂಡಿ ಬೆಟ್ಟದಲ್ಲಿ ಮೂರನೇ ಬಾರಿಗೆ ಭೂ ಕುಸಿತ

ಮೈಸೂರು: ನಿನ್ನೆ ತಡರಾತ್ರಿ ಸುರಿದ ಬಾರೀ ಮಳೆಗೆ ಚಾಮುಂಡಿ ಬೆಟ್ಟದಲ್ಲಿ ಮೂರನೇ ಬಾರಿಗೆ ಭೂ ಕುಸಿತ ಉಂಟಾಗಿದೆ.
ಕಳೆದ ಹದಿನೈದು ದಿನಗಳಿಂದ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹೋಗುವ ಮಾರ್ಗದ ರಸ್ತೆ ಕುಸಿದಿದೆ. ಇದರಿಂದ ಜನರಲ್ಲಿ ಆತಂಕ ಉಂಟು ಮಾಡಿದೆ.
ನಂದಿಗೆ ಹೋಗುವ ಮಾರ್ಗದಲ್ಲಿ ಈ ಹಿಂದೆ ಭೂಕುಸಿತಗೊಂಡು ಆ ಮಾರ್ಗದ ರಸ್ತೆಯನ್ನು ಬಂದ್ ಮಾಡಲಾಗಿತ್ತು, ಕಳೆದ ಮೂರು ದಿನಗಳ ಹಿಂದೆ ರಸ್ತೆ ಬಿರುಕು ಬಿಟ್ಟಿರುವುದು ಕಂಡು ಬಂದಿತ್ತು. ಇದೀಗ ಗುರುವಾರ ತಡರಾತ್ರಿ ಸುರಿದ ಬಾರಿ ಮಳೆಗೆ ಮತ್ತೊಮ್ಮೆ ಭೂ ಕುಸಿತ ಉಂಟಾಗಿದೆ.
ಶೀಘ್ರದಲ್ಲೇ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಭೇಟಿ ನೀಡಿ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಾತ್ಕಾಲಿಕ ಕ್ರಮ ಜರುಗಿಸಲಿದ್ದಾರೆ ಎಂದು ಹೇಳಿದರು.
'ದೊಡ್ಡ ದೊಡ್ಡ ಕಾಂಪ್ಲೆಕ್ಸ್ ಗಳಿಂದ ಭೂ ಕುಸಿತ'
ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ತಂಡದ ಸದಸ್ಯ ಎಂ.ಲಕ್ಷ್ಮಣ್ ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿ ದೊಡ್ಡ ದೊಡ್ಡ ಕಾಂಪ್ಲೆಕ್ಸ್ ಗಳು ತಲೆ ಎತ್ತಿರುವ ಪರಿಣಾಮ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ಕಂಡಿದೆ ಎಂದು ಅಭಿಪ್ರಾಯಿಸಿದ್ದಾರೆ.
ಇಲ್ಲಿ ದೊಡ್ಡ ದೊಡ್ಡ ಕಾಂಪ್ಲೆಕ್ಸ್ ಗಳು ತಲೆ ಎತ್ತಿರುವುದರಿಂದ ಮಳೆ ಬಿದ್ದರೆ ನೀರು ಹರಿಯಲು ಸಾಧ್ಯವಾಗದೆ ಒಂದೇ ಕಡೆ ನೀರು ಹೋಗುವುದರಿಂದ ರಸ್ತೆಯಲ್ಲ ತೇವಾಂಶ ಹೆಚ್ಚಾಗಿ ಭೂ ಕುಸಿತ ಉಂಟಾಗುತ್ತಿದೆ. ಮತ್ತೊಂದೆಡೆ ಕಳಪೆ ಕಾಮಗಾರಿ ಮತ್ತು ಅಧಿಕ ಬಾರಹೊತ್ತು ಸಂಚರಿಸುವ ವಾಹಗಳ ಅತೀ ಹೆಚ್ಚು ಓಡಾಟದಿಂದ ಭೂ ಕುಸಿತ ಸಂಭವಿಸಿದೆ ಎಂದು ಹೇಳಿದರು.






.jpeg)
.jpeg)






