'ಕೇಳಿ ಕಥೆಯ' ಆಡಿಯೋ ಪುಸ್ತಕದ ಆದಾಯದಿಂದ ಸರಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಸಹಾಯ

ಬೆಂಗಳೂರು: 'ಕೇಳಿ ಕಥೆಯ' ಆಡಿಯೋ ಪುಸ್ತಕದಿಂದ ಬರುವ ಸಂಪೂರ್ಣ ಆದಾಯವನ್ನು ಗಡಿನಾಡಿನಲ್ಲಿ ಓದುವ ಸರಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಉಪಯೋಗಿಸಲಾಗುತ್ತಿದ್ದು, ಮೊದಲ ಆವೃತ್ತಿಯಲ್ಲಿ ಬಂದ ಲಾಭದಿಂದ ಗಡಿನಾಡಿನ 9 ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವು ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ 'ಕೇಳಿ ಕಥೆಯ' ತಂಡದ ಮುಕುಂದ್ ಸೆತ್ಲೂರ್ , " ಬರಹಗಾರರು ಮತ್ತು ಸಿನೆಮಾ, ಸಂಗೀತ ಕ್ಷೇತ್ರದಿಂದ ನಮಗೆ ಸಾಕಷ್ಟು ಬೆಂಬಲ ದೊರೆತಿದೆ. ಪ್ರೇಕ್ಷಕರು ಸಹ ನಮ್ಮ ಉದ್ದೇಶವನ್ನು ಉತ್ಸಾಹದಿಂದ ಬೆಂಬಲಿಸಿದರು. ಈ ಬೆಂಬಲದ ಫಲವಾಗಿ ಇಂದು ಹದಿನಾರು ಶಾಲಾ ವಿದ್ಯಾರ್ಥಿನಿಯರಿಗೆ ನೆರವಾಗಲು ಸಾಧ್ಯವಾಗಿದೆ" ಎಂದು ತಿಳಿಸಿದರು.
“ಗಡಿ ಜಿಲ್ಲೆಗಳ ಹೆಣ್ಣುಮಕ್ಕಳ ಶಿಕ್ಷಣವನ್ನು ಬೆಂಬಲಿಸುವುದು ಒಂದು ಉದಾತ್ತ ಕಾರಣವಾಗಿದ್ದು, ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪೋಷಿಸುವಲ್ಲಿ ಬಹಳ ಸಹಕರಿಸುತ್ತದೆ. 'ಕೇಳಿ ಕಥೆಯ' ತಂಡದ ನಿಜವಾದ ಕಾಳಜಿ ಮತ್ತು ಸಮರ್ಪಣಾ ಮನೋಭಾವದಿಂದ ನಾನು ಪ್ರಭಾವಿತನಾಗಿದ್ದೇನೆ. ಅವರ ಪ್ರಯತ್ನದಲ್ಲಿ ನಾನು ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸುತ್ತೇನೆ." ಎಂದು ವಿವೇಕ್ ಶಾನಭಾಗ್ ಹೇಳಿದರು.
ಕಳೆದ ಎರಡು ಆವೃತ್ತಿಗಳಲ್ಲಿ 'ಕೇಳಿ ಕಥೆಯ' ಜೊತೆ ಗುರುತಿಸಿಕೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಕಥೆಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ ಮತ್ತು ಮುಖ್ಯವಾಗಿ ಇದರಿಂದ ಬರುವ ಲಾಭವು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹುಡುಗಿಯರಿಗೆ ಶಿಕ್ಷಣ ನೀಡುವಲ್ಲಿ ಸಹಕಾರಿ ಯಾಗುತ್ತದೆ” ಎಂದು ಸಂಗೀತ ನಿರ್ದೇಶಕಿ ಹಾಗೂ ಗಾಯಕಿಯಾಗಿರುವ ಪಲ್ಲವಿ ಅರುಣ್ ತಿಳಿಸಿದರು.
'ಕೇಳಿ ಕಥೆಯ' ಕನ್ನಡ ಆಡಿಯೋ ಬುಕ್ ಆಗಿದ್ದು, ಈಗ ಒಟ್ಟು 14 ಸಣ್ಣ ಕಥೆಗಳು ಎರಡು ಸಂಪುಟಗಳಲ್ಲಿ ಲಭ್ಯವಿದೆ. ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಶಾಲಾ ಬಾಲಾಕಿಯರ ಶಿಕ್ಷಣಕ್ಕೆ ಬೆಂಬಲವಾಗಿ, ಕನ್ನಡ ಸಾಹಿತ್ಯ ಮತ್ತು ಚಲನಚಿತ್ರ ತಾರೆಯರ ಜಗತ್ತನ್ನು ಒಟ್ಟುಗೂಡಿಸುವ ವಿಶಿಷ್ಟ ಪ್ರಯತ್ನವಾಗಿದ್ದು, ಈ ಪೀಳಿಗೆಯ ಜೀವನ ಶೈಲಿಗೆ ಹೊಂದುವಂತೆ ಇದನ್ನ ಆಡಿಯೋ ಪುಸ್ತಕದ ರೂಪದಲ್ಲಿ ಪ್ಯಾಕೇಜ್ ಮಾಡಲಾಗಿದ್ದು ನಿಮ್ಮ ಮೊಬೈಲುಗಳಲ್ಲೇ ಕೇಳಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ಕಥೆಗಳ ಪಟ್ಟಿ ಇಲ್ಲಿದೆ.








