ಮಂಗಳೂರು: ಮಹಿಳಾ ಕಾಂಗ್ರೆಸ್ ವತಿಯಿಂದ ಗೋಪೂಜೆ ಆಚರಣೆ

ಮಂಗಳೂರು : ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಜೆಪ್ಪು ಬಿಷಪ್ ಕಾಂಪೌಂಡ್ ನಲ್ಲಿರುವ ಮುಂಬೈ ಉದ್ಯಮಿ, ಕಾಂಗ್ರೆಸ್ ಕಾರ್ಯಕರ್ತ ರಾಕೇಶ್ ಶೆಟ್ಟಿಯವರ ಮನೆಯಲ್ಲಿ ಗೋಪೂಜೆ ಕಾರ್ಯಕ್ರಮ ನಡೆಯಿತು.
ಗೋಮಾತೆಗೆ ಆರತಿಯನ್ನು ಮಾಡುವುದರ ಮೂಲಕ ಪೂಜೆ ಮಾಡಲಾಯಿತು. ಮಾಜಿ ಶಾಸಕ ಜೆ. ಆರ್. ಲೋಬೊರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ, ದೀಪಾವಳಿಯ ಸಮಯದಲ್ಲಿ ಗೋಪೂಜೆಯನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ಮಾಡುತ್ತಿರುವುದು ಬಹಳಷ್ಟು ಸಂತೋಷವಾಗಿದೆ. ದೀಪಾವಳಿಯ ದೀಪದಿಂದ ಕತ್ತಲೆಯಿಂದ ಬೆಳಗುವಂತಾಗಲಿ. ಇದು ಎಲ್ಲರ ಜೀವನದಲ್ಲಿ ಪ್ರೀತಿ ಸಾಮರಸ್ಯವನ್ನು ತುಂಬಲಿ.ಜನ ಸಾಮಾನ್ಯರ ಕಷ್ಟಗಳು ದೂರವಾಗಿ, ಅವರ ಜೀವನ ಸುಗಮವಾಗಿ ಸಾಗಲಿ. ಅದೇ ರೀತಿ ಗೋಪೂಜೆ ಆಚರಣೆಗೆ ವಿಶೇಷವಾದ ಸ್ಥಾನವಿದೆ.ಗೋಪೂಜೆ ಮಾಡುವುದರ ಮೂಲಕ ಗೋಮಾತೆಯ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಹೇಳಿದರು.
ಎಐಸಿಸಿ ಕಾರ್ಯದರ್ಶಿ, ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾರವರು ಮಾತನಾಡಿದರು. ಬ್ಲಾಕ್ ಮಹಿಳಾ ಅಧ್ಯಕ್ಷೆ ಚಂದ್ರಕಲಾ ಜೋಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಮೇಯರ್ ಜೆಸಿಂತಾ ಆಲ್ಫ್ರೆಡ್,ಅಪ್ಪಿ, ನಮಿತಾ ರಾವ್, ಪ್ರಭಾಕರ್ ಶ್ರೀಯಾನ್, ಟಿ. ಕೆ. ಸುಧೀರ್, ಸದಾಶಿವ ಅಮೀನ್,ರಮಾನಂದ ಪೂಜಾರಿ, ದುರ್ಗಾ ಪ್ರಸಾದ್, ವಿಜಯಲಕ್ಷ್ಮಿ, ಶೈಲಜಾ, ಕವಿತ ವಾಸು, ಗೀತಾ ಅತ್ತಾವರ, ವಿಕ್ಟೋರಿಯಾ, ಪ್ರವೀತ್ ಕರ್ಕೇರ, ಭಾಸ್ಕರ್ ರಾವ್,ಸರಳಾ ಕರ್ಕೇರ, ಶಾನ್ ಡಿಸೋಜಾ, ಉದಯ ಕುಂದರ್, ಪಿಯೂಸ್ ಡಿಸೋಜಾ, ಲಕ್ಷ್ಮಣ್ ಶೆಟ್ಟಿ, ಹೈದರ್ ಆಲಿ, ಮಮತಾ ಶೆಟ್ಟಿ, ಚಂದ್ರಕಲಾ ರಾವ್ ಮೊದಲಾದವರು ಹಾಜರಿದ್ದರು.









