ದ.ಕ. ಜಿಲ್ಲೆ : ಕೋವಿಡ್ ಓರ್ವ ಬಲಿ, 10 ಮಂದಿಗೆ ಕೊರೋನ ದೃಢ
![ದ.ಕ. ಜಿಲ್ಲೆ : ಕೋವಿಡ್ ಓರ್ವ ಬಲಿ, 10 ಮಂದಿಗೆ ಕೊರೋನ ದೃಢ ದ.ಕ. ಜಿಲ್ಲೆ : ಕೋವಿಡ್ ಓರ್ವ ಬಲಿ, 10 ಮಂದಿಗೆ ಕೊರೋನ ದೃಢ](https://www.varthabharati.in/sites/default/files/images/articles/2021/11/5/312739-1636129139.jpg)
ಮಂಗಳೂರು, ನ.5: ದ.ಕ. ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಸೋಂಕಿ ಓರ್ವ ಬಲಿಯಾಗಿದ್ದಾರೆ. ಹೊಸದಾಗಿ 10 ಮಂದಿಗೆ ಸೋಂಕು ದೃಢಪಟ್ಟಿದ್ದು, 33 ಮಂದಿ ಗುಣಮುಖರಾಗಿದ್ದಾರೆ.
ಪಾಸಿಟಿವಿಟಿ ದರ ಶೇ.0.26 ದಾಖಲಾಗಿದೆ. 1,15,546 ಸೋಂಕಿತರ ಪೈಕಿ 1,13,671 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ನಿಂದಾಗಿ 1,689 ಮಂದಿ ಮೃತಪಟ್ಟಿದ್ದಾರೆ. ಸದ್ಯ 186 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ 88,605 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, 1,07,53,470 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story