ಗಾಝಿಯಾಬಾದ್ : ದೀಪಾವಳಿ ರಾತ್ರಿ ವಯೋವೃದ್ಧ ದಂಪತಿ ಹತ್ಯೆ

ಗಾಝಿಯಾಬಾದ್: ದೀಪಾವಳಿಯ ಸಂದರ್ಭದಲ್ಲಿ ಅಂದರೆ ಶುಕ್ರವಾರ ರಾತ್ರಿ ಗಾಝಿಯಾಬಾದ್‌ನ ಪಟೇಲ್ ನಗರ ಎಂಬಲ್ಲಿ ವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ನೋಯ್ಡಾದಲ್ಲಿ ವಾಸಿಸುವ ಪುತ್ರಿ ಪದೇ ಪದೇ ಕರೆ ಮಾಡಿದರೂ, ಕರೆ ಸ್ವೀಕರಿಸದೇ ಇದ್ದಾಗ, ಅಕ್ಕಪಕ್ಕದವರಿಗೆ ವಿಷಯ ತಿಳಿಸಿದರು. ಅಕ್ಕಪಕ್ಕದವರು ಬಂದು ನೋಡಿದಾಗ ಹತ್ಯೆಯಾಗಿರುವುದು ತಿಳಿದುಬಂತು ಎಂದು ಪೊಲೀಸರು ಹೇಳಿದ್ದಾರೆ.
ಅಕ್ಕಪಕ್ಕದವರು ವೃದ್ಧ ದಂಪತಿಯ ಮನೆಗೆ ಭೇಟಿ ನೀಡಿದಾಗ 72 ರ್ಷದ ಔಷಧ ಡೀಲರ್ ಅಶೋಕ್ ಝೈದ್ಕಾ ಮತ್ತು ಪತ್ನಿ ಮಧು ಝೈದ್ಕಾ ಮನೆಯ ಒಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಖ್ಕೆ ಧಾವಿಸಿ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ದೀಪಾವಳಿ ದಿನ ರಾತ್ರಿ 9 ಗಂಟೆಯ ಸುಮಾರಿಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
Next Story