ಬಂಟ್ವಾಳ; ಬಾಲಕಿಯ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳ ಬಂಧನ
![ಬಂಟ್ವಾಳ; ಬಾಲಕಿಯ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳ ಬಂಧನ ಬಂಟ್ವಾಳ; ಬಾಲಕಿಯ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳ ಬಂಧನ](https://www.varthabharati.in/sites/default/files/images/articles/2021/11/6/312782-1636206597.jpeg)
ಬಂಧಿತ ಆರೋಪಿಗಳು
ಬಂಟ್ವಾಳ, ನ.6: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಒಟ್ಟು ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಫರಂಗಿಪೇಟೆ ಆಟೋ ಚಾಲಕ ರಿಝ್ವಾನ್, ಅರ್ಕುಳ ನಿವಾಸಿ ಖಾಸಿಂ ಮತ್ತು ಅಜ್ಮಲ್ ಹುಸೈನ್ ಬಂಧಿತ ಆರೋಪಿಗಳು.
ನ. 4ರಂದು ಬಂಟ್ವಾಳ ತಾಲೂಕಿನ ಮಹಿಳೆಯೋರ್ವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ತೆರಳಿ ಬಾಲಕಿಯಾದ ತನ್ನ ಮಗಳಿಗೆ ಫರಂಗಿಪೇಟೆ ರಿಕ್ಷಾ ಚಾಲಕ ಮೈ ಕೈ ಮುಟ್ಟಿ ಲೈಂಗಿಕ ಶೋಷಣೆ ನೀಡಿದ್ದಾನೆ ಎಂದು ದೂರು ನೀಡಿದ್ದರು. ಅದರಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ರಿಕ್ಷಾ ಚಾಲಕ ರಿಝ್ವಾನ್ ನನ್ನು ಬಂಧಿಸಿದ್ದಾರೆ.
ನ. 5ರಂದು ಬಾಲಕಿ ತನ್ನ ತಾಯಿಯೊಂದಿಗೆ ಠಾಣೆಗೆ ಹಾಜರಾಗಿ ಸುಮಾರು 5 ತಿಂಗಳ ಹಿಂದೆ ಇಬ್ಬರು ಯುವಕರು ಪರಿಚಯ ಮಾಡಿ ನನ್ನ ಮೇಲೆ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ನೀಡಿದ್ದಾರೆ.
ಈ ಬಗ್ಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಪೊಲೀಸರು ಅರ್ಕುಳದ ಖಾಸಿಂ ಮತ್ತು ಅಜ್ಮಲ್ ಹುಸೈನ್ ಎಂಬವರನ್ನು ಬಂಧಿಸಿದ್ದಾರೆ.