ಕೆಸಿಎಫ್ ಒಮನ್ : 'ಇಶ್ಕೇ ರಸೂಲ್ (ಸಅ) ಮೀಲಾದ್ ಕಾನ್ಫರೆನ್ಸ್'

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿಯ ವತಿಯಿಂದ ನ. 4ರಂದು "ಸ್ವಸ್ಥ ಜಗತ್ತಿನ ಪ್ರವಾದಿ" ಇಶ್ಕೇ ರಸೂಲ್ (ಸಅ) ಅವರ ಜನ್ಮ ದಿನಾಚರಣೆಯ ಅಂಗವಾಗಿ ಮೀಲಾದ್ ಕಾನ್ಫರೆನ್ಸ್ ಆನ್ಲೈನ್ ಝೂಮ್ ಮುಖಾಂತರ ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿಯ ಸಂಘಟನಾ ಅಧ್ಯಕ್ಷ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಕೊಡಗು ಇವರ ಅಧ್ಯಕತೆಯಲ್ಲಿ ಯಶಸ್ವಿಯಾಗಿ ಜರುಗಿತು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಇವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ರಝಾಖ್ ಮುಸ್ಲಿಯಾರ್ ಇವರು ದುಅ ನೆರವೇರಿಸಿದರು.
ಮೀಲಾದ್ ಕಾನ್ಫರೆನ್ಸ್ ಮುಖ್ಯ ಪ್ರಭಾಷಣ ಗಾರರಾಗಿ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಅಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಹಾಗೂ ನಿಝಾರ್ ಖತುಬಿ ಮಡವೂರ್ ಇವರು ಬುರ್ದಾ ಆಲಾಪನೆ ಹಾಗೂ ಕೊನೆಯಲ್ಲಿ ದುಅ ನಡೆಸಿ ಕೊಟ್ಟರು. ಕೆಸಿಎಫ್ ಒಮನ್ ಅಧ್ಯಕ್ಷರಾದ ಅಯ್ಯೂಬ್ ಕೋಡಿ, ಡಿಕೆಎಸ್ಸಿ ಒಮನ್ ಅಧ್ಯಕ್ಷರಾದ ಮೋನಬ್ಬ ಹಾಜಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೆಸಿಎಫ್ ಸೊಹಾರ್ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷ ಇಕ್ಬಾಲ್ ಮದನಿ ಚೆನ್ನಾರ್ ಮೌಲೂದ್ ನ ನೇತೃತ್ವ ವಹಿಸಿದ್ದರು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು, ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬರ್ಕ ಬೊಲ್ಮಾರ್ ,ಕೆಸಿಎಫ್ ಒಮನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ , ಕೋಶಾಧಿಕಾರಿ ಆರಿಫ್ ಕೋಡಿ, ಮೀಲಾದ್ ಸ್ವಾಗತ ಸಮಿತಿ ಚಯರ್ಮೆನ್ ಉಬೈದುಲ್ಲಾ ಸಖಾಫಿ ಮಿತ್ತೂರು ಹಾಗೂ ಕೆಸಿಎಫ್ ಒಮನ್ ರಾಷ್ಟ್ರೀಯ ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಒಮನ್ ಉರ್ದು ವಿಂಗ್ ನಿರ್ದೇಶಕರಾದ ಸಲೀಮ್ ವಿಸ್ಬಾಯಿ ಸ್ವಾಗತಿಸಿದರು. ಮುಹಮ್ಮದ್ ಅಫ್ಫಾನ್ ಕಿರಾಅತ್ ಪಠಿಸಿದರು. ಕಾರ್ಯಕ್ರಮದಲ್ಲಿ ಹನೀಫ್ ಕೆಸಿ ರೋಡ್ ವಂದಿಸಿ ಕಲಂದರ್ ಬಾವ ಕಾರ್ಯಕ್ರಮ ನಿರೂಪಿಸಿದರು.








