ಕ್ರಿಕೆಟ್ ಕೋಚ್ ದಂತಕತೆ ತಾರಕ್ ಸಿನ್ಹಾ ಇನ್ನಿಲ್ಲ

photo:TOI
ಹೊಸದಿಲ್ಲಿ, ನ. 6: ಕ್ರಿಕೆಟ್ ಕೋಚಿಂಗ್ ಕ್ಷೇತ್ರದಲ್ಲಿ ದಂತಕತೆಯಾಗಿರುವ ತಾರಕ್ ಸಿನ್ಹಾ ಶನಿವಾರ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು.
ಅವರು ಹಲವು ತಲೆ ಮಾರುಗಳ ಕ್ರಿಕೆಟಿಗರಿಗೆ ತರಬೇತಿ ನೀಡಿದ್ದಾರೆ. ಅವರಿಂದ ತರಬೇತಿ ಪಡೆದಿರುವ ಅಂತರ್ರಾಷ್ಟ್ರೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಸುರೀಂದರ್ ಖನ್ನಾ, ಮನೋಜ್ ಪ್ರಭಾಕರ್ ಅಜಯ್ ಶರ್ಮ, ಅತುಲ್ ವಾಸನ್, ಆಶಿಶ್ ನೆಹ್ರಾ, ಸಂಜೀವ್ ಶರ್ಮ, ಆಕಾಶ್ ಚೋಪ್ರಾ, ಶಿಖರ್ ಧವನ್, ಅಂಜುಮ್ ಚೋಪ್ರಾ ಮತ್ತು ರಿಶಭ್ ಪಂತ್ ಮುಂತಾದವರು ಸೇರಿದ್ದಾರೆ.
ಅವರು ಸೋನೆಟ್ ಕ್ರಿಕೆಟ್ ಕ್ಲಬ್ನ ಸಂಸ್ಥಾಪಕರಾಗಿದ್ದು ಅದರ ಮೂಲಕ ಕ್ರಿಕೆಟ್ ತರಬೇತಿ ನೀಡುತ್ತಿದ್ದರು. ಅಲ್ಲಿ ತರಬೇತಿ ಪಡೆದಿರುವ ಹಲವಾರು ಮಂದಿ ದಿಲ್ಲಿ ಪರವಾಗಿ ಆಡಿದ್ದಾರೆ.
ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗಿತ್ತು.
ಅವರ ನಿಧನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂತಾಪ ವ್ಯಕ್ತಪಡಿಸಿದೆ.
Next Story







