ಕಡೂರು ಮೂಲದ ಯೋಧ ಜಮ್ಮುವಿನಲ್ಲಿ ನಿಧನ

ಚಿಕ್ಕಮಗಳೂರು, ನ.7: ಕಡೂರು ಮೂಲದ ಯೋಧನೋರ್ವ ಜಮ್ಮುವಿನಲ್ಲಿ ಶನಿವಾರ ಸಂಜೆ ನಿಧನರಾಗಿರುವುದು ವರದಿಯಾಗಿದೆ.
ಕಡೂರು ತಾಲೂಕಿನ ಬಿಳವಾಲ ಗ್ರಾಮದ ಬಿ.ಕೆ.ಶೇಷಪ್ಪ (45) ಮೃತ ಯೋಧ. ಇವರು ಜಮ್ಮುವಿನಲ್ಲಿ ಬಿ.ಎಸ್.ಎಫ್.ನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ನಾಲ್ಕು ದಿನಗಳ ದಿನದ ಹಿಂದೆ ಇವರು ವಾಹನ ರಿಪೇರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಜಾಕ್ ಸ್ಲೀಪ್ ಆಗಿ ತಲೆಗೆ ಗಂಭೀರ ಗಾಯವಾಗಿತ್ತೆನ್ನಲಾಗಿತ್ತು. ಬಳಿಕ ಕೋಮಾ ಸ್ಥಿತಿಗೆ ತಲುಪಿದ್ದ ಶೇಷಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
Next Story





