ವಿಶ್ವಕಪ್:ಅಫ್ಘಾನಿಸ್ತಾನವನ್ನು 124 ರನ್ ಗೆ ನಿಯಂತ್ರಿಸಿದ ನ್ಯೂಝಿಲ್ಯಾಂಡ್

photo: ICC
ಅಬುಧಾಬಿ: ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ನ್ಯೂಝಿಲ್ಯಾಂಡ್ ತಂಡದ ಗೆಲುವಿಗೆ 125 ರನ್ ಗುರಿ ನೀಡಿದೆ.
ರವಿವಾರ ನಡೆದ ಗ್ರೂಪ್-2ರ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಜಯಿಸಿದ ಅಫ್ಘಾನಿಸ್ತಾನವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಅಫ್ಘಾನಿಸ್ತಾನದ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ನಜಿಬುಲ್ಲಾ ಝದ್ರಾನ್ ಸರ್ವಾಧಿಕ ಸ್ಕೋರ್(73, 48 ಎಸೆತ, 6 ಬೌಂಡರಿ, 3 ಸಿಕ್ಸರ್)ಗಳಿಸಿದರು.
ನ್ಯೂಝಿಲ್ಯಾಂಡ್ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್(3-17)ಯಶಸ್ವಿ ಬೌಲರ್ ಎನಿಸಿಕೊಂಡರು. ಟಿಮ್ ಸೌಥಿ(2-24) ಎರಡು ವಿಕೆಟ್ ಪಡೆದರು.
ಗ್ರೂಪ್-2ರಿಂದ ದ್ವಿತೀಯ ಸ್ಥಾನಿಯಾಗಿ ಸೆಮಿ ಫೈನಲ್ ತಲುಪಲು ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಗೆಲ್ಲುವುದು ಅತ್ಯಂತ ಮುಖ್ಯವಾಗಿದೆ.
Next Story