‘ಮಕ್ಕಳ ಕರ್ನಾಟಕ ರಾಜ್ಯೋತ್ಸವ’ ಗೌರವಕ್ಕೆ 30 ಮಂದಿ ಆಯ್ಕೆ
ಕಾರ್ಕಳ, ನ.7: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ನೀಡುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ -2021ಕ್ಕೆ ವಿವಿಧ ಜಿಲ್ಲೆಗಳ, ಹೊರನಾಡು ಮುಂಬಯಿ, ಕಾಸರಗೋಡು ಜಿಲ್ಲೆಗಳಿಗೆ ಸೇರಿದ ಒಟ್ಟು 30 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಅರ್ಚನಾ ಎಸ್. ಕಡಬ, ಆತ್ಮಿ ಶೆಟ್ಟಿ ಉಪ್ಪಳ, ಋತ್ವ ಎಚ್.ಪಿ. ಮಂಗಳೂರು, ಐಶ್ವರ್ಯ ಮೂಲ್ಯ ಮುಂಬಯಿ, ಚುಕ್ಕಿ ವಿಟ್ಲ, ತನುಶ್ರೀ ತುಮಕೂರು, ತನ್ವಿತಾ ಮೊಗವೀರ ಉಡುಪಿ, ದಿಯಾ ಆಳ್ವ ಮೂಡುಬಿದಿರೆ, ದೀಕ್ಷಾ ಡಿ.ರೈ ಪುತ್ತೂರು, ದೃತಿ ದಿನೇಶ ಪೂಜಾರಿ ಮುಂಬೈ, ಧೃತಿ ಎಸ್.ತೆಂಕನಿಡಿಯೂರು, ನಿರೀಕ್ಷಾ ವಿಟ್ಲ, ಪ್ರಣತಿ ಪಿ.ಹರಿತ್ಸಾ ಶ್ರವಣಬೆಳಗೊಳ, ಪ್ರಥಮ್ ಕಾಮತ್ ಕಟಪಾಡಿ, ಪ್ರದ್ಯುಮ್ನಮೂರ್ತಿ ಕಡಂದಲೆ, ಭೂಮಿಕಾ ದಯಾನಂದ್ ಸಾಲಿಯಾನ್ ಮುಂಬೈ, ಮಾಣಿಕ್ ಸುವರ್ಣ ಕಟಪಾಡಿ, ಯೋಗ್ನ ಬಿ.ಅಮೀನ್ ಕುಳಾಯಿ, ಲಾರೆನ್ ಪಿಂಟೋ ಮಂಗಳೂರು, ವರ್ಷಿಣಿ ಆರ್. ಬೆಂಗಳೂರು, ಶರಣ್ಯ ಭಟ್ ಚೇಂಪಿ, ಶ್ರಜನ್ಯ ಜೆ.ಕೆ.ಬೆಳುವಾಯಿ, ಸಂಜಿತ್ ಎಂ.ದೇವಾಡಿಗ ಗಂಗೊಳ್ಳಿ, ಸಂದೇಶ ಕೆ.ಮಂಗಳೂರು, ಸನ್ವಿತ್ ಕುಲಾಲ್ ಮೂಡುಬಿದಿರೆ, ಸಮನ್ವಿತಾ ಗಣೇಶ್ ಅಣಂಗೂರು, ಸಮೃದ್ಧಿ ಕುಂದಾಪುರ, ಸುರಭಿ ಎನ್. ಶಿವಮೊಗ್ಗ, ಸಾನ್ನಿಧ್ಯ ಕವತ್ತಾರು ಕಿನ್ನಿಗೋಳಿ, ಅದ್ಮಿನ್ ಎಸ್.ಉದನೆ ಆಯ್ಕೆ ಯಾಗಿದ್ದಾರೆ.
ಇದರಲ್ಲಿ 5 ಮಂದಿ ಹೊರನಾಡ ಕನ್ನಡಿಗರು, ಇಬ್ಬರು 5 ವರ್ಷದೊಳಗಿನ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಮಟ್ಟದ ಈ ಗೌರವವನ್ನು ಧರ್ಮ ದರ್ಶಿ ಹರಿಕೃಷ್ಣ ಪುನರೂರು ನ.14ರಂದು ಮಧ್ಯಾಹ್ನ 2ಗಂಟೆಗೆ ಅಜೆಕಾರಿನಲ್ಲಿ ಪ್ರದಾನ ಮಾಡಲಿರುವರು ಎಂದು ಮಕ್ಕಳ ವಿಭಾಗದ ಸುನಿಧಿ ಅಜೆಕಾರು ತಿಳಿಸಿದ್ದಾರೆ.





