ಕಾಪು ಎಚ್‌ಆರ್‌ಎಸ್ ತಂಡದಿಂದ ಶ್ರಮದಾನ

ಕಾಪು, ನ.7: ಪ್ರವಾದಿ ಮುಹಮ್ಮದ್(ಸಅ) ರವರ ಸಮಾಜ ಸೇವೆಯ ಶಿಕ್ಷಣವನ್ನು ಅನುಸರಿಸಿ ಹ್ಯೂಮಾನಿಟಿರೈನ್ ರಿಲೀಫ್ ಸೊಸೈಟಿ ಕರ್ನಾಟಕ ಇದರ ಕರಾವಳಿ ವಿಭಾಗದ ಕಾಪು ತಂಡವು ಮಲ್ಲಾರ್ ಗ್ರಾಮದಲ್ಲಿರುವ ಆಯುಷ್ ಕ್ಲಿನಿಕ್ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವಠಾರದಲ್ಲಿ ಶ್ರಮದಾನ ನಡೆಸಿತು.
ಮಾಜಿ ಕರಾವಳಿ ವಲಯದ ಸಂಚಾಲಕ ಅನ್ವರ್ ಅಲಿ ಕಾಪು ಮಾತನಾಡಿ, ಸಾಮಾನ್ಯ ದಿನಗಳಲ್ಲಿ ಎಚ್‌ಆರ್‌ಎಸ್ ತಂಡವು ತಮ್ಮ ಪರಿಸರದಲ್ಲಿ ಇರುವ ಸರಕಾರಿ ಶಾಲೆಗಳು, ಆಸ್ಪತ್ರೆಗಳು ಮತ್ತು ಹಾಸ್ಟೆಲ್ ಇನ್ನಿತರ ಸ್ಥಳಗಳಲ್ಲಿ ಶ್ರಮದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತದೆ. ಇದರ ಸದಸ್ಯರಿಗೆ ಉನ್ನತ ಮಟ್ಟದ ತರಬೇತಿ ಕೊಟ್ಟು ದಿನದ 24 ಗಂಟೆ ಕೂಡಾ ತಮ್ಮನ್ನು ತೊಡಗಿಸಿಕೊಳ್ಳಲು ತಿಳಿಸಲಾಗುತ್ತದೆ ಎಂದು ತಿಳಿಸಿದರು.
ಕಾಪು ತಂಡದ ಗ್ರೂಪ್ ಲೀಡರ್ ಮುಹಮ್ಮದ್ ಅಲಿ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಮುಹಮ್ಮದ್ ಇಕ್ಬಾಲ್ ಸಾಬ್, ಮುಹಮ್ಮದ್ ಫಾರೂಕ್, ರಿಯಾಝ್ ಅಹಮದ್, ಸಾಹಿಲ್, ಅಬ್ದುಲ್ ಅಹದ್, ಸಕ್ಲೇನ್ ಪಾಷ, ಅಮಾನ್ ತಸವರ್, ರಿಝ್ವಾನ್ ಅಬ್ದುಲ್ಲಾ, ಜಿಹಾನ್, ನವಾಝ್, ಬಶೀರ್ ಸಾಬ್, ಅಯ್ಯಾನ್, ಅನೀಸ್ ಅಲಿ, ಶೇಹೆನಾಝ್, ಹಸೀನಾ, ಆಯಿಷಾ ಶೈಮಾ, ಸುಷ್ಮಾ, ರೂಹಿ ಮರ್ಯಮ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕಾಪು ತಾಲೂಕು ಅಧ್ಯಕ್ಷ ಶಬೀಹ್ ಅಹಮದ್ ಕಾಝಿ ಸಹಕಾರ ನೀಡಿದರು.







