ಚಾಮರಾಜನಗರ; ಕಾಡು ಪ್ರಾಣಿ ಭೇಟೆಗೆ ಯತ್ನ: ಮೂವರ ಬಂಧನ

ಚಾಮರಾಜನಗರ: ಕಾಡು ಪ್ರಾಣೆ ಬೇಟೆಗೆ ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಳ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಸಿದ್ದಪ್ಪಸ್ವಾಮಿ(35), ಸಾಧಿಕ್ ಪಾಷ(31), ಕುಮಾರ(21) ಬಂಧಿತರಾಗಿದ್ದು ಅರಣ್ಯಧಿಕಾರಿಗಳ ಕಾರ್ಯಾಚರಣೆ ವೇಳೆ ಮಹದೇವಸ್ವಾಮಿ, ಬಂಗಾರ ಎಂಬ ಆರೋಪಿಗಳು ಪರಾರಿಯಾಗಿದ್ದಾರೆ ತಿಳಿದು ಬಂದಿದೆ.
ಬಂಧಿತರು ಮಧುವನಹಳ್ಳಿ ಗಸ್ತಿನ ಸುಳೆಗುತ್ತಿ ಅರಣ್ಯಪ್ರದೇಶದಲ್ಲಿ ಕಾಡು ಪ್ರಾಣಿಗಳ ಭೇಟೆಗೆ ಯತ್ನಿಸುತ್ತಿದ್ದರು ಎನ್ನಲಾಗಿದ್ದು ಈ ವಿಚಾರ ತಿಳಿದು ಅರಣ್ಯಧಿಕಾರಿಗಳು ದಾಳಿಸಿದ್ದಾರೆ. ಈ ವೇಳೆ ಒಂದು ನಾಡಬಂದೂಕು, ಗನ್ ಪೌಡರ್, ತಲೆಬ್ಯಾಟರಿ ಸೇರಿ ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಅರಣ್ಯಧಿಕಾರಿಗಳು ಪರಾರಿಯಾದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ನಿಸಾರ್ ಅಹಮ್ಮದ್, ಎಂ.ಮಹೇಶ್, ಸಿ.ಪ್ರಭುಸ್ವಾಮಿ, ಅರಣ್ಯ ರಕ್ಷಕ ನವೀನ್ ಕುಮಾರ್, ಯೋಗೀಶ್, ಬಸವರಾಜ್, ವಾಹನ ಚಾಲಕ ರಾಮಚಂದ್ರ ಸೇರಿದಂತೆ ಮತ್ತಿತರರು ಇದ್ದರು.





