ನಟ ವಿಜಯ್ ಸೇತುಪತಿಯ ಮೇಲೆ ಹಲ್ಲೆ ನಡೆಸುವವರಿಗೆ ನಗದು ಬಹುಮಾನ ಘೋಷಿಸಿದ 'ಹಿಂದೂ ಮಕ್ಕಳ್ ಕಚ್ಚಿ'

ವಿಜಯ್ ಸೇತುಪತಿ (Photo: Vijay Sethupathi/Instagram)
ಚೆನ್ನೈ: ಈ ವಾರದ ಆರಂಭದಲ್ಲಿ ನಟ ವಿಜಯ್ ಸೇತುಪತಿ ಹಾಗೂ ಅವರ ತಂಡ ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದಾಗ ವ್ಯಕ್ತಿಯೊಬ್ಬ ಹಲ್ಲೆ ನಡೆಸಲು ಯತ್ನಿಸಿದ ವೀಡಿಯೊ ವೈರಲ್ ಆಗಿತ್ತು. ನಟ ಈ ವಿಷಯವನ್ನು ಸಣ್ಣ ಜಗಳ ಎಂದು ತಳ್ಳಿಹಾಕಿದರೆ, ಹಿಂದೂ ಮಕ್ಕಳ್ ಕಚ್ಚಿ ಎಂದು ಕರೆಯಲ್ಪಡುವ ಗುಂಪು ವಿಜಯ್ ಸೇತುಪತಿಯ ಮೇಲೆ ಹಲ್ಲೆ ನಡೆಸುವವರಿಗೆ 1,001 ರೂಪಾಯಿ ಬಹುಮಾನವನ್ನು ಘೋಷಿಸಿದೆ.
ಹಿಂದೂ ಮಕ್ಕಳ್ ಕಚ್ಚಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ (ಇಂದು ಮಕ್ಕಳ್ ಕಚ್ಚಿ ಎಂದೂ ಉಚ್ಚರಿಸಲಾಗುತ್ತದೆ) ವಿಜಯ್ ಸೇತುಪತಿ ಅವರು ಸ್ವಾತಂತ್ರ್ಯ ಹೋರಾಟಗಾರ ದೈವತಿರು ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅಯ್ಯ ಹಾಗೂ ದೇಶವನ್ನು ಅವಮಾನಿಸಿದ್ದಾರೆ ಎಂದು ಹೇಳುವ ವೀಡಿಯೊದ ಸ್ಕ್ರೀನ್ಶಾಟ್ ಅನ್ನು ಪೋಸ್ಟ್ ಮಾಡಿದೆ.
"ತೇವರ್ ಅಯ್ಯ ಅವರನ್ನು ಅವಮಾನಿಸಿದ ನಟ ವಿಜಯ್ ಸೇತುಪತಿಗೆ ಹಲ್ಲೆ ನಡೆಸಿದ್ದಕ್ಕಾಗಿ ಅರ್ಜುನ್ ಸಂಪತ್ ಅವರು ನಗದು ಪುರಸ್ಕಾರವನ್ನು ಘೋಷಿಸಿದರು. ಸೇತುಪತಿ ಅವರು ಕ್ಷಮೆಯಾಚಿಸುವ ತನಕ ಅವರಿಗೆ ಒದೆಯುವವರಿಗೆ ಒಂದು ಕಿಕ್ ಗೆ ರೂ. 1001/ ಬಹುಮಾನ ನೀಡಲಾಗುವುದು" ಎಂಬ ಟ್ವೀಟ್ ಅನ್ನು ಇಂದು ಮಕ್ಕಳ್ ಕಚ್ಚಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದೆ.
India Today ಜೊತೆ ಮಾತನಾಡಿದ ಅರ್ಜುನ್ ಸಂಪತ್ ,ಇಂತಹ ಹೇಳಿಕೆ ನೀಡಿರುವುದು ವೈರಲ್ ವೀಡಿಯೊಗೆ ಸಂಬಂಧಿಸಿದ್ದು ಎಂದು ಒಪ್ಪಿಕೊಂಡಿದ್ದಾನೆ.
ವಿಜಯ್ ಸೇತುಪತಿಗೆ ಹಲ್ಲೆ ನಡೆಸಲು ಯತ್ನಿಸಿದ ವ್ಯಕ್ತಿ ಮಹಾಗಾಂಧಿಯೊಂದಿಗೆ ಮಾತನಾಡಿದ್ದೇನೆ ಎಂದು ಅರ್ಜುನ್ ಸಂಪತ್ ಹೇಳಿದ್ದಾನೆ ಹಾಗೂ ನಟ ವ್ಯಂಗ್ಯವಾಡಿದ್ದು ವಾಗ್ವಾದಕ್ಕೆ ಕಾರಣವಾಯಿತು ಎಂದಿದ್ದಾನೆ..
Arjun Sampath announces cash award, for kicking actor Vijay Sethupathi for insulting Thevar Ayya.
— Indu Makkal Katchi (Offl) (@Indumakalktchi) November 7, 2021
1 kick = Rs.1001/- for any one who kicks him, until he apologises. pic.twitter.com/Fogf7D9V7S