ಬೆಂಗಳೂರಿನಲ್ಲಿ ಆಟೋ ಪ್ರಯಾಣಿಕರಿಗೆ ಶಾಕ್: ಪ್ರಯಾಣ ದರ ಹೆಚ್ಚಳ

ಸಾಂದರ್ಭಿಕ ಚಿತ್ರ (source: PTI)
ಬೆಂಗಳೂರು, ನ.8: ಬೆಂಗಳೂರು ನಗರದಲ್ಲಿ ಆಟೊ ಪ್ರಯಾಣ ದರವನ್ನು ಹೆಚ್ಚಳ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.
ಕಳೆದ ಹಲವು ಸಮಯದಿಂದ ಪೆಟ್ರೋಲ್ ಗೆ ಭಾರೀ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರ ಒಕ್ಕೂಟಗಳು ಪ್ರಯಾಣ ದರ ಹೆಚ್ಚಳಕ್ಕೆ ಮನವಿ ಸಲ್ಲಿಸಿದ್ದವು. ಅದರಂತೆ ಇದೀಗ ಕನಿಷ್ಠ ಪ್ರಯಾಣ ದರ ಮೊದಲ 2 ಕಿ.ಮೀ.ಗೆ 25 ರೂ.ನಿಂದ 30 ರೂ.ಗೆ ಏರಿಕೆ ಮಾಡಲಾಗಿದೆ. ಅದೇರೀತಿ ಆನಂತರದ ಪ್ರತೀ ಕಿಲೋ ಮೀಟರ್ ಗೆ ತಲಾ 15 ರೂ. ದರ ನಿಗದಿಪಡಿಸಲಾಗಿದೆ. ಪರಿಷ್ಕೃತ ದರವು ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಪ್ರಾಧಿಕಾರ ತಿಳಿಸಿದೆ.
20 ಕೆಜಿ ಮೇಲ್ಪಟ್ಟು ಲಗೇಜ್ ಗೆ 5 ರೂ. ಬಾಡಿಗೆ ದರ ನಿಗದಿಪಡಿಸಲಾಗಿದ್ದು, 50 ಕೆಜಿ ವರೆಗಿನ ಲಗೇಜ್ ಸಾಗಾಟಕ್ಕೆ ಮಾತ್ರ ಅವಕಾಶ ಇರುತ್ತದೆ. ಅದೇರೀತಿ ರಾತ್ರಿ ವೇಳೆ ಸಾಮಾನ್ಯ ದರದ ಜೊತೆಗೆ ಅದರ ಅರ್ಧ ಪಟ್ಟು ದರ ಹೆಚ್ಚಳವಾಗಿದೆ. ಈ ದರ ರಾತ್ರಿ 10ರಿಂದ ಬೆಳಳಗ್ಗೆ 5ರವರೆಗೆ ಅನ್ವಯವಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.
ಪರಿಷ್ಕೃತ ದರ ಹಚ್ಚಳದ ಕುರಿತು ಮೀಟರ್ನಲ್ಲಿ ಪ್ರದರ್ಶಿಸಬೇಕು. ಆಟೋ ಮೀಟರ್ಗಳನ್ನ ದರ ಪರಿಷ್ಕರಣೆಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ.







