ಬ್ರಹ್ಮಾವರ: ಶ್ರೀಶಾರದಾ ಕ್ರೆಡಿಟ್ ಸೊಸೈಟಿ ಶಾಖೆ ಉದ್ಘಾಟನೆ

ಉಡುಪಿ, ನ.8: ಉಡುಪಿ ಶ್ರೀ ಶಾರದಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ನಾಲ್ಕನೇ ಶಾಖೆಯನ್ನು ಬ್ರಹ್ಮಾವರದಲ್ಲಿ ರವಿವಾರ ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಚಾಂತಾರು ಗ್ರಾಪಂ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಂದಾಪುರದ ಸಹಕಾರ ಸಂಘಗಳ ಉಪನಿಬಂಧಕರಾದ ಅರುಣ್ ಕುಮಾರ್ ಎಸ್.ವಿ. ನೂತನ ಶಾಖೆಗೆ ಶುಭ ಹಾರೈಸಿದರು.
ಬ್ರಹ್ಮಾವರ ತಾಲೂಕಿನ ಶ್ರೀಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾದ ಆಧ್ಯಕ್ಷ ಬಿ. ಮಂಜುನಾಥ ರಾವ್, ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಅಶೋಕ್ ಭಟ್, ಕಟ್ಟಡ ಮಾಲಕ ವೆಂಕಟರಮಣ ಶೆಟ್ಟಿ ಎಚ್, ಬ್ರಹ್ಮಾವರ ಶಾಖೆಯ ಸಲಹಗಾರ ಬಿ.ಉದಯರಾವ್ ಬಾರ್ಕೂರು ವೇದಿಕೆಯಲ್ಲಿದ್ದರು.
ಶಾಖಾ ಪ್ರಬಂಧಕಿ ಭಾರತಿ ಎಸ್ ರಾವ್ ಫಲಾನುಭವಿಗಳ ಪಟ್ಟಿ ವಾಚಿಸಿದರು. ಸೊಸಾಟಿಯ ಕಾರ್ಯದರ್ಶಿ ಪಟ್ಟಾಭಿ ರಾಮ ರಾವ್ ವಂದಿಸಿ, ನಿರ್ದೇಶಕ ಕೃಷ್ಣಕುಮಾರ್ ರಾವ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.
Next Story





