ನೋಟು ರದ್ದತಿ ಯಶಸ್ವಿಯಾಗಿದ್ದರೆ ಕಪ್ಪು ಹಣ ಏಕೆ ವಾಪಸ್ ಬರಲಿಲ್ಲ?: ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ: 500 ಹಾಗೂ 1,000 ರೂಪಾಯಿಗಳ ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಬಳಕೆಯನ್ನು ರದ್ದುಗೊಳಿಸಿದ ನೋಟು ಅಮಾನ್ಯೀಕರಣದ ಐದನೇ ವಾರ್ಷಿಕೋತ್ಸವದಂದು ವಿರೋಧ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಕೇಂದ್ರ ಸರಕಾರವನ್ನು ಟೀಕಿಸಿವೆ. ಈ ಕ್ರಮವನ್ನು ಒಂದು ದುರಂತ ಎಂದು ಕರೆದಿವೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೋಮವಾರ ಹಿಂದಿಯಲ್ಲಿ ಟ್ವೀಟ್ ಮಾಡಿ, “ನೋಟು ರದ್ದತಿ ಯಶಸ್ವಿಯಾಗಿದ್ದರೆ ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ? ಕಪ್ಪು ಹಣ ಏಕೆ ವಾಪಸ್ ಬರಲಿಲ್ಲ? ಆರ್ಥಿಕತೆ ಏಕೆ ನಗದು ರಹಿತವಾಗಿಲ್ಲ? ಭಯೋತ್ಪಾದನೆಗೆ ಏಕೆ ಪೆಟ್ಟುಕೊಟ್ಟಿಲ್ಲ? ಹಣದುಬ್ಬರವನ್ನು ಏಕೆ ನಿಯಂತ್ರಿಸಲಾಗಿಲ್ಲ?ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಟಿಎಂಸಿ ನಾಯಕ ಡೆರೆಕ್ ಒ'ಬ್ರಿಯಾನ್ ನವೆಂಬರ್ 8 ಅನ್ನು 'ಕಪ್ಪು ದಿನ' ಎಂದು ಕರೆದರು ಹಾಗೂ 2016 ರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿದ್ದ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. 'ಕಠಿಣ ನಿರ್ಧಾರ' ವನ್ನು ರದ್ದುಗೊಳಿಸುವಂತೆ ಮಮತಾ ಅವರು ಕೇಂದ್ರ ಸರಕಾರವನ್ನು ಕೇಳಿದ್ದರು.
ಕಪ್ಪುಹಣವನ್ನು ಕಡಿಮೆ ಮಾಡಲು ಹಾಗೂ ತೆರಿಗೆ ಅನುಸರಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8, 2016 ರಂದು 500 ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಿದ್ದರು.
अगर नोटबंदी सफल थी तो
— Priyanka Gandhi Vadra (@priyankagandhi) November 8, 2021
भ्रष्टाचार खत्म क्यों नहीं हुआ?
कालाधन वापस क्यों नहीं आया?
अर्थव्यवस्था कैशलेस क्यों नहीं हुई?
आतंकवाद पर चोट क्यों नहीं हुई?
महंगाई पर अंकुश क्यों नहीं लगा?#DemonetisationDisaster
On the night of 8 November 2016, barely hours after #Demonetisation was announced, only @MamataOfficial got it spot on.
— Derek O'Brien | ডেরেক ও'ব্রায়েন (@derekobrienmp) November 8, 2021
Five tweets calling out the draconian decision. (Take a look) #Black_Day_Indian_Economy pic.twitter.com/zpdmkFnZZM